ಶಿವಮೊಗ್ಗದಲ್ಲಿ ಎಷ್ಟು ಪೊಲೀಸ್ ಹುದ್ದೆಗಳು ಖಾಲಿಯಿವೆ? : ಏನ್ ಹೇಳಿದಾರೆ ಎಸ್‌ಪಿ

ಶಿವಮೊಗ್ಗ : ಜಿಲ್ಲೆಯಲ್ಲಿ ಕಳೆದ ವರ್ಷದಲ್ಲಿ 300 ಕಾನ್ಸ್‌ಟೇಬಲ್ ಹುದ್ದೆಗಳು ಖಾಲಿಯಿದ್ದವು. ಆದ್ರೆ ನಿರಂತರವಾಗಿ ರಿಕ್ಯುಪ್‌ಮೆಂಟ್ ಮಾಡಿಕೊಂಡಿದ್ದರಿಂದ ಇವಾಗ ನಮ್ಮಲ್ಲಿ 105 ಕಾನ್ಸ್‌ಟೇಬಲ್ ಹುದ್ದೆಗಳು ಖಾಲಿಯಿವೆ ಎಂದು ಶಿವಮೊಗ್ಗ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್ ಮಾಹಿತಿ ನೀಡಿದರು.

ಮಾಧ್ಯಮ ಪ್ರತಿನಿಧಿಗಳ ಜೊತೆ ನಡೆದ ಸಂವಾದದಲ್ಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 32 ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳು ಖಾಲಿಯಿದ್ದು ಇದಕ್ಕೆ ನೋಟಿಫಿಕಶೇನ್ ಕೂಡ ಆಗಿದೆ. ಮುಂದಿನ ವರ್ಷದ ಆರಂಭದೊಳಗೆ ಈ ಹುದ್ದೆಗಳು ಕೂಡ ಭರ್ತಿಯಾಗಲಿವೆ ಎಂದರು.