ಪ್ರತಿಭಟನಾ ನಿರತರ ಮೇಲೆ ಜೇನು ದಾಳಿ 

ಶಿವಮೊಗ್ಗ : ಹರ್ಷನ ಕೊಲೆ ಮಾಡಿದ ಹಂತಕರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆಸಲಾಗುತ್ತಿದ್ದ ಪ್ರತಿಭಟನೆ ವೇಳೆ ಜೇನು ನೊಣಗಳ ದಾಳಿ ನಡೆದಿದೆ.

ಹರ್ಷ ಹತ್ಯೆಯನ್ನು ಖಂಡಿಸಿ ವಿವಿಧ ಹಿಂದೂ ಪರ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಗುತ್ತಿತ್ತು. ಪ್ರತಿಭಟೆಯಲ್ಲಿ ನೂರಾರು ಮಂದಿ ಭಾಗವಹಿಸಿದ್ದರು. ಈ ನಡುವೆ ಪ್ರತಿಭಟನಾ ನಿರತರ ಮೇಲೆ ಜೇನು ನೋಣಗಳು ದಾಳಿ ಮಾಡಿ ಕೆಲಕಾಲ ಆತಂಕದ ವಾತಾವರಣ ಸೃಷ್ಠಿಯಾಗಿತ್ತು. ದಾಳಿಯಿಂದಾಗಿ ಹಲವರಿಗೆ ಗಾಯಗಳಾಗಿವೆ. ಬಳಿಕ  ಹೊಗೆ ಹಾಕಿ ಜೇನು ನೊಣಗಳನ್ನು ಓಡಿಸಿ, ಪ್ರತಿಭಟನೆ ನಡೆಸಲಾಗಿದೆ