ಗೃಹ ಸಚಿವರಿಗೆ ಕಾಮನ್ ಸೆನ್ಸ್ ಇಲ್ಲ : ಡಿಕೆಶಿ 

ಬೆಂಗಳೂರು : ಗೃಹ ಮಂತ್ರಿಗಳಿಗೆ ಕಾಮನ್ ಸೆನ್ಸ್ ಇಲ್ಲ. ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಈ ರೀತಿ ಹೇಳಿಯನ್ನು ನೀಡ್ತಾಯಿದ್ದಾರೆ ಎಂದು ಚಂದ್ರಶೇಖರ್ ಕೊಲೆ ಸಂಬಂಧ ಗೃಹ ಸಚಿವರ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಿಡಿ ಕಾರಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು, ಪೊಲೀಸ್ ಕಮೀಷನರ್ ಹಾಗೂ ಡಿಜಿ ಮೊದಲು ಹೋಮ್ ಮಿನಿಸ್ಟ್‌ರ್ ಮೇಲೆ ಕೇಸ್ ಹಾಕಬೇಕು. ಸಿಎಎ, ಎನ್‌ಆರ್‌ಸಿ ಸಂದರ್ಭದಲ್ಲಿ ಕೆಲವರ ಹೇಳಿಕೆಗಳ ವಿರುದ್ಧ ಕೇಸ್‌ಗಳನ್ನು ದಾಖಲಿಸಿದ್ದೀರಿ. ಗೃಹ ಸಚಿವರು ಜಾತಿ, ಧರ್ಮ, ಸಮಾಜದ ಕುರಿತಾಗಿ ವೈಷಮ್ಯ ಮೂಡಿಸುವ ಹೇಳಿಕೆಯನ್ನು ನೀಡಿದ್ದಾರೆ. ಕೂಡಲೇ ಅವರ ವಿರುದ್ಧ ಪೊಲೀಸರು ಕೇಸ್ ದಾಖಲಿಸಿ ಬಂಧಿಸಬೇಕು. ಮುಖ್ಯಮಂತ್ರಿಗಳೂ ತಕ್ಷಣವೇ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದ್ದಾರೆ.