ವೇಟ್‌ಲಿಪ್ಟ್ಂಗ್ ಮಾಡಿದ ಗೃಹಸಚಿವರು!

ಬೆಂಗಳೂರು : ಗೃಹ ಸಚಿವರು ವೈಟ್ ಲಿಫ್ಟ್ ಮಾಡೋದ್ರಲ್ಲೂ ಎತ್ತಿದ ಕೈ... ವ್ಯಾಯಾಮ ಶಾಲೆಯ ಉದ್ಘಾಟನೆಗೆ ಬಂದ ಸಚಿವರು ಒಂದು ಕೈ ನೋಡೇ ಬಿಡೋಣ ಅಂತ ವೈಟ್ ಲಿಫ್ಟ್ ಮಾಡಿದರು.

ಹೌದು, ಬೆಂಗಳೂರು ನಗರ ಮೀಸಲು ಪಡೆ ವಿಭಾಗದಲ್ಲಿ ನಿರ್ಮಾಣವಾದ ನವೀಕೃತ ಪೊಲೀಸ್ ವ್ಯಾಯಾಮ ಶಾಲೆಯನ್ನ ಗೃಹಸಚಿವ ಆರಗ ಙ್ಞನೇಂದ್ರ ಉದ್ಘಾಟಿಸಿದರು. ಸಚಿವರು ವೇಟ್ ಲಿಪ್ಟಿಂಗ್ ಮಾಡುವ ಮೂಲಕ ವ್ಯಾಯಾಮ ಶಾಲೆಯ ಉದ್ಘಾಟನೆ ಮಾಡಿದ್ದು ವಿಶೇಷವಾಗಿತ್ತು. ಪೊಲೀಸ್ ಸಿಬ್ಬಂದಿಯ ದೈಹಿಕ ಕ್ಷಮತೆ ಹೆಚ್ಚಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತಿದೆ ಎಂದು ಸಚಿವರು ತಿಳಿಸಿದ್ರು.