ಮೆರವಣಿಗೆಯಲ್ಲಿ ಗಾಯಗೊಂಡವರನ್ನು ಭೇಟಿ ಮಾಡಿದ ಹರ್ಷ ಕುಟುಂಬ 

ಶಿವಮೊಗ್ಗ : ಫೆಬ್ರವರಿ 21ರಂದು ಹರ್ಷ ಶವಯಾತ್ರೆ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದು ಗಲಾಟೆ ನಿಯಂತ್ರಸಿಲು ಪೊಲೀಸರು ಟಿಯರ್ ಗ್ಯಾಸ್ ಬಳಕೆ ಮಾಡಿದ್ದರು. ಪರಿಣಾಮವಾಗಿ ಸೀಗೆಹಟ್ಟಿಯ ರಘು ಮಾಣಿಕ್ಯ ಹಾಗೂ ಒಟಿ ರೋಡಿನ ರಾಕೇಶ್ ಎಂಬುವವರು ಗಾಯಗೊಂಡಿದ್ದರು.

ಗಾಯಾಳುಗಳನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಾಯಾಳುಗಳನ್ನ ಹರ್ಷನ ತಂದೆ ನಾಗರಾಜ್, ತಾಯಿ ಪದ್ಮ ಹಾಗೂ ಸಹೋದರಿಯರು ಭೇಟಿಯಾಗಿ ಸಾಂತ್ವನ ಹೇಳಿ ಆರ್ಥಿಕ ಸಹಾಯ ಮಾಡಿದರು. ಹರ್ಷನ ತಾಯಿಗೊಂಡ ಒಬ್ಬನನ್ನು ಸಮಾಧಾನ ಮಾಡುವ ವೇಳೆ ಹರ್ಷ ಇಲ್ಲ ನೀನೆ ನನ್ನ ಮಗ ಎಂದರು.