ಶಿವಮೊಗ್ಗ : ಆ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡಬೇಕು.. ಯಾವಾಗ ಏನಾಗುತ್ತೋ ಏನೋ ಅನ್ನೋ ಭಯ. ಇಲ್ಲಿ ಯಮ ಸಹ ಕಾದು ಕುಳಿತಿದ್ದಾನೆ. ಇದ್ಯಾವ ರಸ್ತೆ ಅಂದ್ರೆ ಶಿವಮೊಗ್ಗ ನಗರದ ಹೃದಯ ಭಾಗದಲ್ಲಿರುವ ಜೈಲ್ ರಸ್ತೆ.
ಸ್ಮಾರ್ಟ್‌ಸಿಟಿ ಯೋಜನೆಗೆ ಸಂಬಂಧಿಸಿದ ಕಾಮಗಾರಿಗಳು ಇಲ್ಲಿ ನಡೀತಾ ಇವೆ. ವರ್ಷಗಳೇ ಉರುಳಿದ್ರೂ ರಸ್ತೆ ನೆಟ್ಟಗಾಗಿಲ್ಲ. ಗುಂಡಿಗಳೇ ತುಂಬಿಕೊಂಡು ಹೋಗಿವೆ. ಶಾಲೆಗೆ ತೆರಳುವ ವಿದ್ಯಾರ್ಥಿಗಳು, ವಯಸ್ಸಾದವರು ನೋಡಿಕೊಂಡು ಓಡಾಡಬೇಕು. ವಾಹನ ಸವಾರರಂತೂ ಎಚ್ಚರಿಕೆಯ ಹೆಜ್ಜೆಯನ್ನು ಇಲ್ಲಿ ಹೆಜ್ಜೆ ಇಟ್ಟು ಯಾಮಾರಿದ್ರೆ ಯಮನ ಪಾದ ಸೇರೋದು ಗ್ಯಾರಂಟಿ.
ದುರಂತ ಅಂದ್ರೆ ಇಲ್ಲಿ ಒಂದೇ ಒಂದು ಎಚ್ಚರಿಕೆ ಫಲಕ ಇಲ್ಲ. ನಿಧಾನವಾಗಿ ಚಲಿಸಿ ಅನ್ನೋ ಬೋರ್ಡ್ ಸಹ ಹಾಕಿಲ್ಲ. ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದೇ ಕಾಮಗಾರಿ ಹೇಗೆ ನಡೆಸ್ತಾರೆ ಅನ್ನೋದು ಸಾಮಾನ್ಯ ನಾಗರಿಕರ ಪ್ರಶ್ನೆಯಾಗಿದೆ. ಇದಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ನಡೆಸಿದಾಗ, ಫೆಬ್ರವರಿ ೨೦ರ ಒಳಗೆ ಸರಿಪಡಿಸುವ ಭರವಸೆ ನೀಡಿದ್ರು. ಇನ್ನೇನು 1ನೇ ತಾರೀಖು ಬಂತು. ಇನ್ನೂ 20 ದಿನದಲ್ಲಿ ಅದೇನ್ ಮಾಡ್ತಾರೋ ಏನೋ.. ಜನ್ರು ಮಾತ್ರ ಎಚ್ಚರಿಕೆಯಿಂದ ಇರಬೇಕು. ಇಲ್ಲ ಅಂದ್ರೆ ಕೈಕಾಲು ಮುರಿಯುತ್ತೋ ಇಲ್ಲವೇ ಪ್ರಾಣವಾದ್ರೂ ಹೋಗಬೇಕು ಅನ್ನೋ ಪರಿಸ್ಥಿತಿ ಇದೆ.