ಹೊನ್ನಾಳಿ, ನ್ಯಾಮತಿಯಲ್ಲಿ ಮಳೆಯ ಆರ್ಭಟ 

ಹೊನ್ನಾಳಿ : ಶಿವಮೊಗ್ಗ ಜಿಲ್ಲೆಯಾದ್ಯಂತ ಮಳೆಯ ಆರ್ಭಟ ಮುಂದುವರಿದಿದೆ. ಇನ್ನು ಪಕ್ಕದ ದಾವಣಗೆರೆ ಜಿಲ್ಲೆಯಲ್ಲಿ ಮಳೆಯ ಆರ್ಭಟ ಹೆಚ್ಚಾಗಿದ್ದು, ಹಳ್ಳಕೊಳ್ಳಗಳು ಅಪಾಯ ಮಟ್ಟದಲ್ಲಿ ಹರಿಯುತ್ತಿದ್ದು, ಕೆಲ ಕಡೆ ಸಂಚಾರ ಸಂಪೂರ್ಣ ಕಟ್ ಆಗಿದೆ. ಹೊನ್ನಾಳಿ ತಾಲೂಕಿನ ಬಲಮುರಿ ಬಳಿಯೂ ಹೊಳೆಯ ಆರ್ಭಟ ಹೆಚ್ಚಾಗಿದ್ದು, ಸುತ್ತಮುತ್ತ ಎಲ್ಲಿ ನೋಡಿದ್ರೂ ನೀರೇ ನೀರು ಕಾಣಸಿಗುತ್ತಿದೆ. ತೋಟ, ಹೊಲಗಳು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿ ಹೋಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ತುಮ್ಮಿನಕಟ್ಟೆ-ಹೊನ್ನಾಳಿ ಸಂಪರ್ಕ ರಸ್ತೆಯು ಹನುಮಸಾಗರ ತಾಂಡ ಸಮೀಪ ಕೊಚ್ಚಿ ಹೋಗಿದೆ. ಸೋಮನಮಲ್ಲಾಪುರ, ದೊಡೇರಹಳ್ಳಿ ಗ್ರಾಮದಲ್ಲಿ ಅಪಾರ ಪ್ರಮಾಣದಲ್ಲಿ ಬೆಳೆಹಾನಿ ಸಂಭವಿಸಿದೆ. ಹಾಗೇನೆ ಸಾಕಷ್ಟು ಸಾರ್ವಜನಿಕ ಆಸ್ತಿ-ಪಾಸ್ತಿಗಳಿಗೂ ಹಾನಿಯಾಗಿದೆ.

ಸಾಗರದಲ್ಲಿ ಅಬ್ಬರಿಸಿದ ಮಳೆರಾಯ

ಸಾಗರ : ಜುಲೈ ತಿಂಗಳ ಆರಂಭದಿಂದಲೇ ಅಬ್ಬರಿಸೋಕೆ ಶುರು ಮಾಡಿದ್ದ ಮಳೆರಾಯ ಕಳೆದ ಒಂದೆರಡು ವಾರದಿಂದ ಕೊಂಚ ತಣ್ಣಗಾಗಿದ್ದಾನೆ. ಆದ್ರೂ ಕೆಲವೊಮ್ಮೆ ಬಂದು ಆರ್ಭಟಿಸುತ್ತಿರುವ ಮಳೆ ಭಾರಿ ಅವಾಂತರಗಳನ್ನು ಸೃಷ್ಟಿಸ್ತಾಯಿದೆ. ಸಾಗರ ತಾಲೂಕಿನಲ್ಲಿ ಸೋಮವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಹಲುವ ಕಡೆ ಬೆಳೆಗಳು ಜಲಾವೃತವಾಗಿದೆ. ಅಡಿಕೆ ತೋಟದಲ್ಲಿ ನೀರು ನಿಂತಿದೆ. ತೋಟದ ಸುತ್ತಲು ಮೊಣಕಾಲು ತನಕ ನೀರು ನಿಂತಿದ್ದು, ಇದು ತೋಟವು ಕೆರೆಯೋ ಎಂದು ಅನುಮಾನ ಮೂಡುವಷ್ಟು ಜಲಾವೃತವಾಗಿದೆ. ಈ ರೀತಿ ಆದ್ರೆ ಅಡಿಕೆ ಬೆಳೆಯನ್ನು ಉಳಿಕೊಳ್ಳೋದು ಹೇಗೆ ಎಂದು ರೈತರು ಕಂಗಾಲಾಗಿದ್ದಾರೆ.

ರಾತ್ರಿ ಕಳೆದು ಬೆಳಗಾಗುವುದರ ಒಳಗೆ ಭಾರಿ ಅನಾಹುತ

ಶಿವಮೊಗ್ಗ : ಹಗಲಿಡೀ ಬಿಸಿಲಿನ ಬೇಗೆಯಲ್ಲಿ ಬೇಯುವ ಶಿವಮೊಗ್ಗ ನಗರದಲ್ಲಿ ರಾತ್ರಿ ಆದರೆ ಮಳೆರಾಯ ಬಂದು ತಂಪೆರೆಯುತ್ತಿದ್ದಾನೆ. ಕಳೆದ ಕೆಲ ದಿನಗಳಿಂದ ಶಿವಮೊಗ್ಗ ನಗರದಲ್ಲಿ ರಾತ್ರಿಯಿಡೀ ಭಾರಿ ಮಳೆ ಸುರಿಯುತ್ತಿದೆ. ಮಳೆ ಅಬ್ಬರ ಎಷ್ಟಿದೆ ಎಂದರೆ ರಾತ್ರಿ ಕಳೆದು ಬೆಳಗಾಗುವ ವೇಳೆಗೆ ನಾನಾ ಅನಾಹುತಗಳು ಸಂಭಿಸ್ತಾಯಿದೆ. ಗೋಪಾಲಗೌಡ ಬಡಾವಣೆ, ಶಾಂತಮ್ಮ ಲೇಔಟ್ ಸೇರಿದಂತೆ ಅನೇಕ ಬಡಾವಣೆಗಳಲ್ಲಿ ಮಳೆ ರದ್ದಾಂತವನ್ನೆ ಮಾಡಿದೆ. ನಗರದ ಜನ್ರು ಮಳೆ ಯಾಕಾದರು ಬರುತ್ತೋ ಎಂದು ಶಪಿಸುವಂತಾಗಿದೆ. ರಾತ್ರೀಯಿಡಿ ಬಳೆಯ ಅಬ್ಬರಕ್ಕೆ ಆತಂಕದಿಂದ ಎಚ್ಚರಿರುವಂತಹ ಸ್ಥಿತಿ ನಿರ್ಮಾಣವಾಗಿದೆ.

ಭದ್ರಾ ಹಾಗೂ ಲಿಂಗನಮಕ್ಕಿ ಜಲಾಶಯದಲ್ಲಿ ನೀರಿನ ಮಟ್ಟ ಎಷ್ಟಿದೆ?

ಶಿವಮೊಗ್ಗ : ಜಿಲ್ಲಿಯಲ್ಲಿ ಕಳೆದ ೨ ವಾರಗಳಿಂದ ಮಳೆಯ ಅಬ್ಬರ ಕಡಿಮೆಯಾಗಿದೆ. ಆದ್ರೂ ಕೂಡ ಆಗೊಮ್ಮೆ ಈಗೊಮ್ಮೆ ಬರುವ ಮಳೆ ಆರ್ಭಟಿಸಿ ಹೋಗ್ತಾಯಿದೆ. ಮಳೆಯಿಂದಾಗಿ ಭದ್ರಾ ಜಲಾಶಯದ ಗರಿಷ್ಠ ನೀರಿನ ಮಟ್ಟ ೧೮೬ ಅಡಿಯಿದು ೧೮೪.೨ ಅಡಿಗಳಷ್ಟು ನೀರು ತುಂಬಿದೆ. ೫ ಸಾವಿರದ ೩೧೯ ಕ್ಯೂಸೆಕ್ ನೀರು ಒಳ ಹರಿವಿದ್ದು ಅಷ್ಟೆ ಪ್ರಮಾಣದ ನೀರನ್ನು ಹೊರಬಿಡಲಾಗ್ತಾಯಿದೆ. ಇನ್ನು ಲಿಂಗನಮಕ್ಕಿ ಜಲಾಶಯದ ಗರಿಷ್ಠ ನೀರಿನ ಮಟ್ಟ ೧೮೧೯ ಅಡಿಯಿದ್ದು ೧೭೯೯.೫೫ ಅಡಿಗಳಷ್ಟು ನೀರು ತುಂಬಿದೆ. ೩೦ ಸಾವಿರದ ೭೫೬ ಕ್ಯೂಸೆಕ್ ನೀರು ಒಳ ಹರಿವಿದ್ದು ೪೪೩೧.೮೮ ಕ್ಯೂಸೆಕ್ ಹೊರ ಹರಿವಿದೆ.