ಮಳೆನಾಡಾದ ಮಲೆನಾಡು

ಶಿವಮೊಗ್ಗ : ಮಲೆನಾಡಿನಲ್ಲಿ ವರುಣ ಆರ್ಭಟ ಜೋರಾಗಿದೆ. ಜಿಲ್ಲೆಯ ಹೊಸನಗರ, ಸಾಗರ ಹಾಗೂ ತೀರ್ಥಹಳ್ಳಿ ತಾಲೂಕಿನಲ್ಲಿ ಮಳೆರಾಯ ಕೊಂಚವು ಬಿಡುವು ಕೊಡದೆ ಸುರಿಯುತ್ತಿದ್ದಾನೆ. ಜಿಲ್ಲೆಯಲ್ಲಿ ಕಳೆದ ೨೪ ಗಂಟೆಯಲ್ಲಿ ಒಟ್ಟು ೨೮೦.೮೦ ಮಿಮಿ ಮಳೆಯಾಗಿದ್ದು, ಸರಾಸರಿ ೪೦.೧೧ ಮಿಮಿ ಮಳೆ ದಾಖಲಾಗಿದೆ. ಇನ್ನು ಜುಲೈ ತಿಂಗಳ ಸಾಮಾನ್ಯ ಮಳೆಯ ಸರಾಸರಿ ಪ್ರಮಾಣ ೭೬೪.೯೦ ಮಿಮಿ ಇದ್ದು, ಇದುವರೆಗೆ ಸರಾಸರಿ ೧೬೮.೭೭ ಮಿಮಿ ಮಳೆ ದಾಖಲಾಗಿದೆ. ಕಳೆದ ೨೪ ಗಂಟೆಯಲ್ಲಿ ತಾಲೂಕುವಾರು ಸುರಿದ ಮಳೆಯ ಪ್ರಮಾಣವನ್ನು ನೋಡೋದಾದ್ರೆ, ಶಿವಮೊಗ್ಗದಲ್ಲಿ ೧೭.೬೦ ಮಿಮಿ., ಭದ್ರಾವತಿಯಲ್ಲಿ ೯.೯೦ ಮಿಮಿ., ಹೊಸನಗರದಲ್ಲಿ ೫೩.೭೦ ಮಿಮಿ, ಸಾಗರದಲ್ಲಿ ೭೨.೩೦ ಮಿಮಿ., ಶಿಕಾರಿಪುರದಲ್ಲಿ ೨೧.೦೦ ಮಿಮಿ., ಸೊರಬದಲ್ಲಿ ೪೫.೦೦ ಮಿಮಿ. ಹಾಗೂ ತೀರ್ಥಹಳ್ಳಿಯಲ್ಲಿ ೬೧.೩೦ ಮಿಮಿ ಮಳೆಯಾಗಿದೆ. 


ಗರಿಷ್ಠ ನೀರಿನ ಮಟ್ಟ ತಲುಪಿದ ತುಂಗಾ ಜಲಾಶಯ

ಕಳೆದ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯ ನದಿಗಳು ಮೈದುಂಬಿ ಹರಿಯುತ್ತಾಯಿದ್ದು ಜಲಾಶಯಗಳಿಗೆ ಜೀವ ಕಳೆ ಬಂದಾಂತಾಗಿದೆ. ತುಂಗಾ ಜಲಾಶಯದ ಗರಿಷ್ಠ ಮಟ್ಟ ೫೮೮.೨೪ ಅಡಿಯಿದ್ದು ಈಗಾಗಲೇ ನೀರು ಗರಿಷ್ಠ ಮಟ್ಟವನ್ನು ತಲುಪಿದೆ. ೪೨ ಸಾವಿರದ ೩೫೮ ಕ್ಯೂಸೆಕ್ ನೀರು ಒಳಹರಿವಿದ್ದು, ಅಷ್ಟೇ ಪ್ರಮಾಣದ ನೀರನ್ನು ಜಲಾಶಯದಿಂದ ಹೊರಬಿಡಲಾಗ್ತಾಯಿದೆ. ಇನ್ನು ಅದೇ ರೀತಿ ಭದ್ರಾ ಜಲಾಶಯದ ಗರಿಷ್ಠ ನೀರಿನ ಮಟ್ಟ ೧೮೬ ಅಡಿಯಿದ್ದು ೧೬೦.೧೧ ಅಡಿಗಳಷ್ಟು ನೀರು ತುಂಬಿದೆ. ೨೬ ಸಾವಿರದ  ೪ ಕ್ಯೂಸೆಕ್ ನೀರು ಒಳ ಹರಿವಿದ್ದು ೧೩೬ ಕ್ಸೂಸೆಕ್ ಹೊರ ಹರಿವಿದೆ.

ತುಂಗೆಗೆ ಬಾಗಿನ ಅರ್ಪಿಸಿದ ಕೆಎಸ್‌ಈ

ಮುಂಗಾರಿನ ಸಿಂಚನಕ್ಕೆ ತುಂಗಾ ನದಿ ಮೈದುಂಬಿ ಹರಿಯುತ್ತಿದ್ದಾಳೆ. ಈ ಹಿನ್ನೆಲೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ನದಿಗೆ ಬಾಗಿನ ಅರ್ಪಿಸಿದ್ದಾರೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತುಂಗಾನದಿಯ ನೀರಿನ ಅಳತೆ ಗೋಲಿನಂತೆ ಕಾಣುವ ಕೊರ್ಪಳ್ಳಯ್ಯನ ಛತ್ರದ ಬಳಿ ಇರುವ ಮಂಟಪ ಬಹುತೇಕ ಮುಳುಗಿದ್ದು ಸಚಿವರು ನದಿಗೆ ಪೂಜೆ ಸಲ್ಲಿಸಿದ್ದಾರೆ. ಪತ್ನಿ ಜಯಲಕ್ಷ್ಮಿ, ಪುತ್ರ ಕೆ.ಈ. ಕಾಂತೇಶ್‌ರೊಂದಿಗೆ ಸೇರಿ ಬಾಗಿನ ಅರ್ಪಿಸಿದ್ದಾರೆ. ಈ ವೇಳೆ ಬಿಜೆಪು ನೂರಾರು ಕಾರ್ಯಕರ್ತರು ಭಾಗಿಯಾಗಿ ಈಶ್ವರಪ್ಪಗೆ ಸಾಥ್ ನೀಡಿದ್ದಾರೆ.