ಮೆಲೆನಾಡಿನಲ್ಲಿ ಮಳೆಯ ಅಬ್ಬರ

ಶಿವಮೊಗ್ಗ : ಕಳೆದ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯ ಜಲಾಶಯಗಳಿಗೆ ಜೀವ ಕಳೆ ಬಂದಾಂತಾಗಿದೆ. ಭದ್ರಾ ಜಲಾಶಯದ ಗರಿಷ್ಠ ನೀರಿನ ಮಟ್ಟ ೧೮೬ ಅಡಿಯಿದ್ದು ೧೫೮.೬ ಅಡಿಗಳಷ್ಟು ನೀರು ತುಂಬಿದೆ. ೩೦ ಸಾವಿರದ ೧೬೭ ಕ್ಯೂಸೆಕ್ ನೀರು ಒಳ ಹರಿವಿದ್ದು ೧೩೩ ಕ್ಸೂಸೆಕ್ ಹೊರ ಹರಿವಿದೆ. ಇನ್ನು ಲಿಂಗನಮಕ್ಕಿ ಜಲಾಶಯದ ಗರಿಷ್ಠ ನೀರಿನ ಮಟ್ಟ ೧೮೧೯ ಅಡಿಯಿದ್ದು ೧೭೬೨.೧೦ ಅಡಿಗಳಷ್ಟು ನೀರು ತುಂಬಿದೆ. ೩೯ ಸಾವಿರದ ೨೬೨ ಕ್ಯೂಸೆಕ್ ನೀರು ಒಳ ಹರಿವಿದ್ದು ೯೦೩.೯೬ ಕ್ಯೂಸೆಕ್ ಹೊರ ಹರಿವಿದೆ. ಅದೇ ರೀತಿ ತುಂಗಾ ಜಲಾಶಯದ ಗರಿಷ್ಠ ಮಟ್ಟ ೫೮೮.೨೪ ಅಡಿಯಿದ್ದು ಈಗಾಗಲೇ ನೀರು ಗರಿಷ್ಠ ಮಟ್ಟವನ್ನು ತಲುಪಿದೆ. ೩೨ ಸಾವಿರದ ೮೫ ಕ್ಯೂಸೆಕ್ ನೀರು ಒಳಹರಿವಿದ್ದು, ಅಷ್ಟೇ ಪ್ರಮಾಣದ ನೀರನ್ನು ಜಲಾಶಯದಿಂದ ಹೊರಬಿಡಲಾಗ್ತಾಯಿದೆ.

ತುಂಬಿ ಹರಿದಳು ತುಂಗಾ

ಮುಂಗಾರಿಗೆ ತುಂಗಾ ನದಿಯು ಮೈದುಂಬಿ ಹರಿಯಲು ಆರಂಭಿಸಿದ್ದಾಳೆ. ಶೃಂಗೇರಿ, ಕಿಗ್ಗಾ, ಕೊಪ್ಪ, ತೀರ್ಥಹಳ್ಳಿ ಭಾಗಗಳಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ತುಂಗಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಇನ್ನೂ ಮೊದಲ ಮಳೆಯಲ್ಲಿಯೇ ತುಂಬಿಕೊಂಡು ತುಂಗಾ ಜಲಾಶಯ ಭರ್ತಿಯಾಗಿದೆ. ಶಿವಮೊಗ್ಗ ಭಾಗದಲ್ಲಿ ತುಂಗಾನದಿ ಅಪಾಯದ ಮಟ್ಟ ತಲುಪುತ್ತಿದೆ. ಇವತ್ತು ನೀರಿನ ಹರಿವು ಹೆಚ್ಚಿದ್ದರಿಂದ ತುಂಗಾನದಿಯ ನೀರಿನ ಅಳತೆ ಗೋಲಿನಂತೆ ಕಾಣುವ ಕೊರ್ಪಳ್ಳಯ್ಯನ ಛತ್ರದ ಬಳಿ ಇರುವ ಮಂಟಪ ಬಹುತೇಕ ಮುಳುಗಿದೆ.