ಶಿವಮೊಗ್ಗ : ಎಲ್ಲೂ ನ್ಯಾಯ ಸಿಗಲ್ಲ ಅಂತ ಇವತ್ತು ಗೊತ್ತಾಯ್ತು ಎಂದು ಶಿವಮೊಗ್ಗಲ್ಲಿ ಭರ್ಬರವಾಗಿ ಕೊಲೆಯಾಗಿದ್ದ ಹರ್ಷನ ಸಹೋದರಿ ಅಶ್ವಿನಿ ಆರಗ ಜ್ಞಾನೇಂದ್ರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗೃಹ ಸಚಿವ ಆರಗ ಜ್ಞಾನೇಂದ್ರ ಬಳಿ ನ್ಯಾಯ ಕೇಳಲು ಹೋದ್ರೆ ಜೋರು ಮಾಡಿ ಕಳ್ಸಿದ್ದಾರೆ ಎಂದು ಅಶ್ವಿನಿ ಆರೋಪಿಸಿದ್ದಾರೆ.
ಹರ್ಷ ಕೊಲೆ ಪ್ರಕರಣದಲ್ಲಿನ ಆರೋಪಿಗಳು ಪರಪ್ಪನ ಅಗ್ರಹಾರದಲ್ಲಿ ರಾಜಾಥಿತ್ಯ ಅನುಭವಿಸ್ತಯಿದ್ದಾರೆ. ಜೈಲಿನಲ್ಲಿಯೇ ಮೊಬೈಲ್ ಬಳಕೆ ಮಾಡಿಕೊಂಡು ಆರಾಮವಾಗಿದ್ದಾರೆ. ಈ ಸಂಬಂಧ ಗೃಹ ಸಚಿವರನ್ನು ಭೇಟಿ ಮಾಡಿ ಹರ್ಷ ಸಾವಿನ ಬಗ್ಗೆ ನ್ಯಾಯ ಕೇಳಲು ಹೋದಾಗ ಗೃಹಸಚಿವರು ಜೋರು ಮಾಡಿ ವಾಪಸ್ ಕಳಿಸಿದ್ದಾರೆ.
ಸಚಿವರೇ ಹೀಗೆ ಮಾಡಿದ್ರ ಯಾರತ್ರ ನ್ಯಾಯ ಕೇಳಬೇಕು. ಈ ವಿಚಾರವಾಗಿ ಎಲ್ಲೂ ನ್ಯಾಯ ಸಿಗಲ್ಲ ಅಂತ ಇವತ್ತು ಗೊತ್ತಾಯ್ತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.