ಬೆಂಗಳೂರು : ಶುಕ್ರವಾರ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಹರ್ಷ ಕೊಲೆ ಆರೋಪಿಗಳ ಸೆಲ್‌ಗಳ ಮೇಲೆ ಪೊಲೀಸ್ ಅಧಿಕಾರಿಗಳು ರೇಡ್ ಮಾಡಿದ್ದರು. ಆ ಸಂದರ್ಭದಲ್ಲಿ ಆರೋಪಿಗಳ ಬಳಿಯಲ್ಲಿ ಮೊಬೈಲ್‌ಗಳು ಹಾಗೂ ಅದಕ್ಕೆ ಸಂಬಂಧಿಸಿದ ಉಪಕರಣಗಳು ಪತ್ತೆಯಾಗಿದ್ದವು. ಈ ಸಂಬಂಧ ಪರಪ್ಪನ ಅಗ್ರಹಾರದ ಸ್ಟೇಷನ್‌ನಲ್ಲಿ ಕೇಸ್ ಕೂಡ ದಾಖಲಾಗಿದೆ. ಹರ್ಷನ ಕೊಲೆ ಆರೋಪಿಗಳಾದ ಖಾಸೀಫ್ ಆಂಡ್ ಗ್ಯಾಂಗ್ ಪರಪ್ಪನ ಅಗ್ರಹಾರದಲ್ಲಿರುವ ತಮ್ಮ ಸೆಲ್‌ನಲ್ಲಿ ಸೆಲ್ಫಿಗಳನ್ನ ತೆಗೆದುಕೊಳ್ಳುವುದಷ್ಟೆ ಅಲ್ಲದೆ, ತಮಗೆ ಬೇಕಾದವರಿಗೆ ವಿಡಿಯೋ ಕಾಲ್‌ಗಳನ್ನು ಮಾಡಿದೆ. ಈ ವಿಡಿಯೋಗಳು ಬೇರೆಯದ್ದೆ ರೀತಿಯಲ್ಲಿ ಎಡಿಟ್ ಆಗಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ ತೊಡಗಿತ್ತು. ಹೀಗಾಗಿ ವಿಷಯ ತಿಳಿಯುತ್ತಲೇ ಶಿವಮೊಗ್ಗ ಪೊಲೀಸ್ ಹಾಗೂ ಬೆಂಗಳೂರು ಪೊಲೀಸರು ಪರಪ್ಪನ ಅಗ್ರಹಾರ ಜೈಲಿನಲ್ಲಿ ತಪಾಸಣೆ ನಡೆಸಿ ಮೊಬೈಲ್‌ಗಳನ್ನು ಜಪ್ತಿ ಮಾಡಿದ್ದಾರೆ.
ಗೃಹಸಚಿವರು ಏನ್ ಹೇಳಿದ್ರು?
ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಗೃಹಸಚಿವ ಆರಗ ಜ್ಞಾನೇಂದ್ರ ಈ ವಿಚಾರ ನನ್ನ ಗಮನಕ್ಕೆ ಬಂದಿದೆ. ಮೊಬೈಲ್ ಬಳಕೆ ಮಾಡ್ತಾಯಿದ್ದ ಆರೋಪಿಗಳ ಮೇಲೆ ಕೇಸ್ ದಾಖಲು ಮಾಡಲಾಗುವುದು ಅದೇ ರೀತಿ ಅದಕ್ಕೆ ಸಹಕಾರ ನೀಡಿರುವ ಅಧಿಕಾರಗಳ ವಿರುದ್ಧವೂ ಪ್ರಕರಣ ದಾಖಲಿಸಿಲಾಗುವುದು. ಪರಪ್ಪನ ಅಗ್ರಹಾರದಲ್ಲಿ ಜಾಮರ್ ಅಳವಡಿಸಲು ಈ ಬಾರಿಯ ಬಜೆಟ್‌ನಲ್ಲಿ ಹಣ ಮೀಸಲಿಡಲಾಗಿದ್ದು ಸದ್ಯದಲ್ಲಿಯೇ ಜಾಮರ್ ಅಳವಡಿಸ್ತೀವಿ. ಈ ವಿಚಾರದಲ್ಲಿ ಎಷ್ಟೆ ದೊಡ್ಡ ಅಧಿಕಾರಿ ಇದ್ದರೂ ಕೂಡ ಬಿಡವುದಿಲ್ಲ ಎಂದಿದ್ದಾರೆ.