ಸಾಗರ : ಇಲ್ಲಿನ ಮಲೆನಾಡು ಅಭಿವೃದ್ಧಿ ಪ್ರಾಧಿಕಾರದ 56ನೇ ಸರ್ವಸ್ಯರ ಸಭೆಯು ನಾನಾ ಗೊಂದಲಕ್ಕೆ ಕಾರಣವಾಗಿತ್ತು. ನೂತನ ಅಧ್ಯಕ್ಷರ ನೇಮಕಾತಿಯ ವಿಚಾರ ಎರಡು ಗುಂಪುಗಳ ನಡುವೆ ಸಂಘರ್ಷಕ್ಕೆ ಕಾರಣವಾಗಿತ್ತು. ಈ ನಡುವೆ ಶಾಸಕ ಹರತಾಳು ಹಾಲಪ್ಪ ಸಭೆಗೆ ಯಾಕೆ ಬಂದಿದ್ದಾರೆ ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು.
ಆದರೆ ಈ ಸಭೆಯಿಂದ 57ನೇ ವಾರ್ಷಿಕ ಸಭೆಯವರೆಗೆ ಶಾಸಕರನ್ನು ಮಲೆನಾಡು ಅಭಿವೃದ್ಧಿ ಪ್ರಾಧಿಕಾರದ ನಾಮ ನಿರ್ದೇಶಿತ ಸದಸ್ಯರನ್ನಾಗಿ ಎಂಡಿಎಫ್ ಅಧ್ಯಕ್ಷ ಕೆ.ಹೆಚ್. ಶ್ರೀನಿವಾಸ್ ಆಯ್ಕೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಎಂಡಿಎಫ್ ಸದಸ್ಯತ್ವ ಪಡೆದುಕೊಂಡ ಕಾರಣ ಶಾಸಕರು ಸಭೆಯಲ್ಲಿ ಭಾಗಿಯಾಗಿದ್ದರು ಎಂದು ತಿಳಿದು ಬಂದಿದೆ.