ಹೈಲೆಟ್ಸ್:
ಸರಕಾರಿ ನೌಕರರಿಗೆ ಅನಾವಶ್ಯಕವಾಗಿ ಕಿರುಕುಳ ಕೊಡಬೇಡಿ
ನಾವು ಎಲ್ಲದಕ್ಕೂ ರೆಡಿಯಾಗಿ ಇದ್ದೀವಿ
ಖಡಕ್ ಎಚ್ಚರಿಕೆ ಕೊಟ್ಟ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ
ಸಾಗರ:
ನಾವು ಎಲ್ಲದಕ್ಕೂ ರೆಡಿ ಇದ್ದೇವೆ. ಆರ್‌ಟಿಇ, ಸಕಾಲ ಇದೆ. ಕಾನೂನಿನ ಮೂಲಕ ಹೋರಾಟ ಮಾಡಲಿ. ಆದರೆ, ಅನಾವಶ್ಯಕತವಾಗಿ ಸರಕಾರಿ ನೌಕರರಿಗೆ ಕಿರಿಕಿರಿ ಕೊಟ್ರೆ ಸಹಿಕೊಳ್ಳೋದಕ್ಕೆ ಸಾಧ್ಯವಿಲ್ಲವೆಂದು ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಎಚ್ಚರಿಕೆ ಕೊಟ್ಟಿದ್ದಾರೆ. ಸಾಗರದಲ್ಲಿ ನಡೆದ ಸರಕಾರಿ ನೌಕರರ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡು ಮಾತಾಡಿದರು. ಒಂದು ಸಲ, ಎರಡು ಸಲ ಸುಮ್ಮನಿರಬಹುದು, ಮೂರನೇ ಸಲ ಸುಮ್ಮನಿರಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.