ಸಾಗರದ ಮಲೆನಾಡ ಅಭಿವೃದ್ಧಿ ಪ್ರತಿಷ್ಠಾನಕ್ಕೆ ಅಧ್ಯಕ್ಷರಾಗಿ ಹರನಾಥರಾವ್ ಆಯ್ಕೆ

ಹೈಲೆಟ್ಸ್:

ಸಾಗರದ ಮಲೆನಾಡ ಅಭಿವೃದ್ಧಿ ಪ್ರತಿಷ್ಠಾನಕ್ಕೆ ನೂತನ ಅಧ್ಯಕ್ಷ 

ನೂತನ ಅಧ್ಯಕ್ಷರಾಗಿ ಹರನಾಥರಾವ್ ಆಯ್ಕೆ 

ಶುಭ ಕೋರಿದ ಶಾಸಕ ಹರತಾಳು ಹಾಲಪ್ಪ 

ಸಾಗರ:

ಕಾಲೇಜನ್ನು ಬೆಳೆಸಬೇಕು, ಉಳಿಸಬೇಕು, ಸರಿಯಾದ ಶಿಕ್ಷಣವನ್ನು ಈ ಪ್ರಾಂತ್ಯದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ನೀಡಬೇಕು ಎಂದು ಎಂಡಿಎಫ್ ನೂತನ ಅಧ್ಯಕ್ಷ ಹರನಾಥರಾವ್ ಹೇಳಿದ್ದಾರೆ. ಸಾಗರದ ಮಲೆನಾಡ ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷರಾಗಿ ಹರನಾಥ್‌ರಾವ್ ಆಯ್ಕೆಯಾದ ಬಳಿಕ ಅವರು ಮಾತನಾಡಿದರು. ನಮ್ಮಗಳ ಮೊದಲ ಆದ್ಯತೆ ಸಿಬ್ಬಂದಿ, ಶಿಕ್ಷಕ, ಶಿಕ್ಷಕೇತರಿಗೆ ಸಂಬಳ ಜಾಸ್ತಿ ಮಾಡಿಸುವುದು ಎಂದು ಅವರು ಹೇಳಿದರು. ಸಾಗರದ ಶಾಸಕ ಹರತಾಳು ಹಾಲಪ್ಪ ನೂತನವಾಗಿ ಆಯ್ಕೆಯಾದ ಅಧ್ಯಕ್ಷರಿಗೆ ಶುಭ ಕೋರಿದರು.