ಹೆಚ್.ಆರ್.ಕೇಶವಮೂರ್ತಿ ನಮ್ಮ ಜಿಲ್ಲೆಯವರೆಂಬುದೇ ಹೆಮ್ಮೆ : ಕೆಎಸ್‌ಈ : ಕೆಎಸ್‌ಈ

ಹೊಸಳ್ಳಿ : ಹಾಡು ಹಾಡುವ ಮೂಲಕ ಸಚಿವ ಕೆ.ಎಸ್.ಈಶ್ವರಪ್ಪ, ಗಮಕ ಕಲಾವಿದನಿಗೆ ಅಭಿನಂದನೆ ಸಲ್ಲಿಸಿದರು. ಹೊಸಹಳ್ಳಿಗೆ ತೆರೆಳಿ ವಿನೂತನ ರೀತಿಯಲ್ಲಿ ಅಭಿನಂದನೆ ಸಲ್ಲಿಸಿದರು.

ಈ ವೇಳೆ ಮಾತಾಡಿದ ಅವರು, ಹೆಚ್.ಆರ್.ಕೇಶವಮೂರ್ತಿಯವರಿಗೆ ಪದ್ಮಶ್ರಿ ಪ್ರಶಸ್ತಿ ಸಿಕ್ಕಿದ್ದರಿಂದಾಗಿ ಇಡೀ ದೇಶಕ್ಕೆ ಗಮಕ ಕಲೆ ಏನೆಂಬುದು ಪರಿಚಯವಾಗಿದೆ. ಇವರು ನಮ್ಮ ಶಿವಮೊಗ್ಗ ಜಿಲ್ಲೆಯವರು, ನಮ್ಮ ತಾಲೂಕಿನವರೆಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು. ಈ ಬಾರಿ ಪ್ರಕಟವಾಗಿರುವ ಪದ್ಮಶ್ರಿ ಪ್ರಶಸ್ತಿ ಪಟ್ಟಿಯಲ್ಲಿ ಕೇಶವಮೂರ್ತಿ ಅವರು ಕೂಡ ಆಯ್ಕೆ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಚಿವರು ಇವರ ಮನೆಗೆ ಭೇಟಿ ನೀಡಿ, ಭಜನೆ ಹಾಡು ಹೇಳಿ, ಅಭಿನಂದನೆ ಸಲ್ಲಿಸಿದ್ದಾರೆ. ಈ ವೇಳೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ.ಮೇಘರಾಜ್, ಮಹಾನಗರ ಪಾಲಿಕೆ ಮೇಯರ್ ಸುನೀತಾ ಅಣ್ಣಪ್ಪ ಸೇರಿದಂತೆ ಬಿಜೆಪಿ ಮುಖಂಡರು ಉಪಸ್ಥಿತಿದ್ದರು.