ಗ್ರಾಮ ಪಂಚಾಯತಿ ಪ್ರತಿನಿಧಿಗಳ ಹಾಗೂ ಸಿಬ್ಬಂದಿ ಕ್ರೀಡಾಕೂಟ

ಶಿವಮೊಗ್ಗ : ನೆಹರು ಕ್ರೀಡಾಂಗಣದಲ್ಲಿ ಗ್ರಾಮ ಪಂಚಾಯತಿ ಪ್ರತಿನಿಧಿಗಳ ಹಾಗೂ ಸಿಬ್ಬಂದಿ ಕ್ರೀಡಾಕೂಟ ನಡೆಯಿತು. ಎಲ್ಲಾ ಗಾಮಪಂಚಾಯತಿ ಸದಸ್ಯರನ್ನು ಒಗ್ಗೂಡಿಸುವ ನಿಟ್ಟುನಲ್ಲಿ ಈ ಕ್ರೀಡಾಕೂಟ ಆಯೋಜನೆ ಮಾಡಲಾಗಿದೆ.

]ಅಂದ್ಹಾಗೆ ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರಣ್ ತಮ್ಮ ಪ್ರನಾಳಿಕೆಯಲ್ಲಿ ಈ ರೀತಿ ಕ್ರೀಡಾಕೂಟ ಆಯೋಜಿಸುವುದಾಗಿ ಘೋಷಿಸಿದ್ದರು. ಅದರಂತೆ ನಡೆದ ಕ್ರೀಡಾಕೂಟಕ್ಕೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಚಾಲನೆ ನೀಡಿದರು. ಹಾಗೇನೆ ಗುಂಡು ಎಸೆದು ಎಲ್ಲರ ಗಮನ ಸೆಳೆದರು. ಗ್ರಾಮ ಪಂಚಾಯತಿ ಜನಪ್ರತಿನಿಧಿಗಳು ಪಂಚೆ, ಸೀರೆಗಳನ್ನು ಉಟ್ಟು ಮಿಂಚುತ್ತಿದ್ದರು. ಈ ವೇಳೆ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಶಾಸಕ ಕೆ.ಬಿ.ಅಶೋಕ್ ನಾಯಕ್ ಹಾಗೂ ಪ್ರಮುಖರು ಭಾಗಿಯಾಗಿದ್ದರು.