ಆರಂಭವಾದ ವಿಧಾನ ಮಂಡಲ ಅಧಿವೇಶನ : ಜಂಟಿ ಸದನವನ್ನುದ್ದೇಶಿಸಿ ರಾಜ್ಯಪಾಲರ ಭಾಷಣ 

ಬೆಂಗಳೂರು : ರಾಜ್ಯ ವಿಧಾನಮಂಡಲ ಅಧಿವೇಶನ ಆರಂಭವಾಗಿದೆ. ಮೊದಲ ದಿನ ಉಭಯ ಸದನಗಳ ಸದಸ್ಯರ ಸಮ್ಮುಖದಲ್ಲಿ ರಾಜ್ಯಪಾರು ಭಾಷಣ ಮಾಡುವುದು ಸಂಪ್ರದಾಯ. ಅದರಂತೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಜಂಟಿ ಸದನ ಉದ್ದೇಶಿಸಿ ಭಾಷಣ ಮಾಡಿದರು.

ಈ ಅಧಿವೇಶನ ಫೆಬ್ರವರಿ ೨೫ರವರೆಗೆ ನಡೆಯಲಿದೆ. ಈ ವೇಳೆ ಸದನದಲ್ಲಿ ಹಿಜಾಬ್-ಕೇಸರಿ ಸಂಘರ್ಷ, ನದಿ ಜೋಡಣೆ ಹಾಗೂ ಮೇಕುದಾಟು ಯೋಜನೆ ಸೇರಿದಂತೆ ಹಲವು ವಿಚಾರಗಳು ಆಡಳಿತ ಹಾಗೂ ವಿರೋಧ ಪಕ್ಷದ ಜಟಾಪಟಿಗೆ ಕಾರಣವಾಗುವ ಸಾಧ್ಯತೆಯಿದೆ.