ಏಪ್ರಿಲ್ 21ಕ್ಕೆ ಸರ್ಕಾರಿ ನೌಕರರ ದಿನಾಚರಣೆ 

ಶಿವಮೊಗ್ಗ : ಕರ್ನಾಟಕದಲ್ಲಿ ನಾನಾ ಜಯಂತಿ ಹಾಗೂ ಆಚರಣೆಗಳನ್ನು ಮಾಡ್ತಾಯಿದ್ದೇವೆ. ಇದಕ್ಕೆ ಹೊಸ ದಿನಾಚರಣೆಯೊಂದು ಈ ವರ್ಷದಿಂದ ಹೊಸದಾಗಿ ಸೇರಿಕೊಳ್ಳುತ್ತಿದೆ. ಹೌದು, ಇನ್ಮುಂದೆ ಸರ್ಕಾರಿ ನೌಕರರಿಗೂ ಒಂದು ದಿನಾಚರಣೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.

ಈ ಕುರಿತು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿಸದ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ, ಏಪ್ರಿಲ್ 21ರಂದು ರಾಜ್ಯಾದ್ಯಂತ ಏಕ ಕಾಲದಲ್ಲಿ ಸರ್ಕಾರಿ ನೌಕರರ ದಿನಾಚರಣೆ ಆಚರಸಲಾಗುತ್ತದೆ. ಸಿಎಂ ಬಸವರಾಜ ಬೊಮ್ಮಾಯಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಹಾಗೆನೇ, ಎಲ್ಲಾ ಜಿಲ್ಲೆಗಳಲ್ಲಿಯೂ ಅಲ್ಲಿನ ನೌಕರರ ಸಂಘದ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ದಿನಾಚರಣೆ ನಡೆಯಲಿದೆ ಎಂದು ಮಾಹಿತಿ ನೀಡಿದರು.