ಹಿಂದುತ್ವದ ಕವಚ ತೊಟ್ಟವರು ಎಲ್ಲಡಗಿದ್ದಾರೆ: ಬೇಳೂರು ಪ್ರಶ್ನೆ 

ಶಿವಮೊಗ್ಗ: ಹಿಂದುತ್ವದ ಕಾವಲುಗಾರರು ಎಂದು ಹೇಳುವ ಬಿಜೆಪಿಯ ಮುಖವಾಡ ಮೈಸೂರಲ್ಲಿ ದೇವಾಲಯ ಒಡೆಯುವ ಮೂಲಕ ಕಳಚಿ ಬಿದ್ದಿದೆ ಎಂದು ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ಗುಡುಗಿದ್ರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರಿನಲ್ಲಿ ಪುರಾತನ ದೇವಾಲಯ ಕೆಡವಿದ ಹಿನ್ನೆಲೆ ರಾಜ್ಯದಲ್ಲಿ ವ್ಯಾಪಕ ವಿರೋಧ ಕೇಳಿ ಬಂದಿದೆ. ಮೂವರು ಸಂಸದರು ಮಾತ್ರ ಹಿಂದುತ್ವ ಎಂದರೆ ಕವಚ ಎಂದು ಹೇಳುತ್ತಿದ್ದವರು ಇಂದು ದೇವಾಲಯ ಕೆಡವಿದ ಹಿನ್ನೆಲೆ ತುಟಿಕ್‌ಪಿಟಿಕ್ ಎನ್ನುತ್ತಿಲ್ಲ. ಈಗೆಲ್ಲಿ ಅಡಗಿ ಕುಳಿತಿದ್ದಾರೆ ಎಂದು ಪ್ರಶ್ನಿಸಿದ್ರು. ಬಿಜೆಪಿ ಸಿಂಪತಿ ಗಿಟ್ಟಿಕೊಳ್ಳುತ್ತಿದೆ. ಬೇರೆ ಸಂದರ್ಭದಲ್ಲಿ ಶೋಭಾ ಮೇಡಂ ಅವರು ಬಾಯಿ ಹರಿದುಕೊಳ್ಳುತ್ತಿದ್ದರು. ಈಗ ಬಾಯಿ ಬಿಡುತ್ತಿಲ್ಲ. ಚುನಾವಣೆ ವೇಳೆ ಬಾಂಬ್ ಹಾಕುವ ರೀತಿ ಹಿಂದುತ್ವ ಎಂದು ಬಾಯಿ ಬಡಿದುಕೊಳ್ಳವುವವರು ಇಂದು ಮಾತನಾಡುತ್ತಿಲ್ಲ ಎಂದು ಕಿಡಿಕಾರಿದ್ರು. ಇನ್ನು ಇದೇ ಘಟನೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ನಡೆದಿದ್ದರೆ ಇಡೀ ರಾಜ್ಯಕ್ಕೆ ಬೆಂಕಿ ಹಚ್ಚುವ ಕೆಲಸ ಮಾಡ್ತಿದ್ರು ಎಂದು ಬೇಳೂರು ಹರಿಹಾಯ್ದರು.