ಬಡ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ

ಶಿವಮೊಗ್ಗ : ಬಡ ವಿದ್ಯಾರ್ಥಿಗಳಿಗೆ ೩೦ ಪರ್ಸೆಂಟ್ ಸೀಟುಗಳನ್ನು ಉಚಿತವಾಗಿ ನೀಡಲು ಬ್ರಹ್ಮಾವರ ಸಮೀಪದ ಅಚಲಾಡಿ ಗ್ರಾಮದಲ್ಲಿನ ಇಸಿಆರ್ ಕಾಲೇಜು ಮುಂದಾಗಿದೆ.

ಈ ಕುರಿತು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಆಕಾಶ್, ನಮ್ಮ ಕಾಲೇಜು ೧೨ ನೇ ವರ್ಷದ ಸಂಭ್ರಮದಲ್ಲಿದೆ. ಹೀಗಾಗಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಬಡ ವಿದ್ಯಾರ್ಥಿಗಳಿಗೆ ಮೂರು ವರ್ಷದ ಪದವಿಯನ್ನು ಸಂಪೂರ್ಣವಾಗಿ ನೀಡಲಾಗುವುದು. ಆದ್ದರಿಂದ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದ್ರು.