ಶಿವಮೊಗ್ಗ : ತಮ್ಮ ತಂದೆಗೆ ಆಗಿರುವ ಅನ್ಯಾಯ ಆಗಿದೆ. ಅವರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಆಗ್ರಹಿಸಿ ಬಾಣಂತಿ ಮಹಿಳೆಯೊಬ್ಬರು ತಮ್ಮ ಮೂರು ತಿಂಗಳ ಎಳೆ ಮಗುವನ್ನು ಮಡಿಲಲ್ಲಿ ಮಲಗಿಸಿಕೊಂಡು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದ್ರು.
ಭದ್ರಾವತಿ ತಾಲೂಕಿನ ಕೋಮರಹಳ್ಳಿ ಗ್ರಾಮದ ರಾಮನಾಥರಾವ್ ಎಂಬುವವರ ಜಮೀನನ್ನು ಅವರ ಅಣ್ಣಂದಿರು ಮೋಸದಿಂದ ಅವರ ಹೆಸರಿಗೆ ಮಾಡಿಕೊಂಡಿದ್ದಾರೆ. ಈಗ ನಮಗೆ ನಮ್ಮ ಜಮೀನಿಗೆ ಹೋಗಲು ಬಿಡ್ತಾಯಿಲ್ಲ. ನಮ್ಮನು ಅವಾಚ್ಯ ಶಬ್ದಗಳಿಂದ ಬೈದು ತಡೆಹಿಡಿಯುತ್ತಿದ್ದಾರೆ.
ಈ ಸಂಬಂಧ ಪೊಲೀಸರಿಗೆ ದೂರು ನೀಡಿದರು ಕೂಡ ಅವರು ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ನೀವೆ ನಮಗೆ ನ್ಯಾಯ ಕೊಡಬೇಕು. ಇಲ್ಲವಾದಲ್ಲಿ ದಯಾಮರಣ ನೀಡಿ ಎಂದು ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದ್ರು.