ಹೈಲೆಟ್ಸ್:
ಗೌರವಧನ ಹಾಗೂ ಪ್ರೋತ್ಸಹ ಧನಕ್ಕೆ ನೀಡಲು ಆಗ್ರಹ
ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಪ್ರತಿಭಟನೆ
ಮಾಸಿಕ ಗೌರವಧನ ೧೨ ಸಾವಿರ ನೀಡಲು ಒತ್ತಾಯ
ಶಿವಮೊಗ್ಗ:
ಆಶಾ ಕಾರ್ಯಕರ್ತೆಯರಿಗೆ ಗೌರವಧನ ಹಾಗೂ ಪ್ರೋತ್ಸಹಧನವನ್ನು ನೀಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾಧ್ಯಕ್ಷೆ ರಾಜೇಶ್ವರಿ ಮಾತನಾಡಿ, ಆಶಾ ಕಾರ್ಯಕರ್ತೆಯರಿಗೆ ಸರ್ಕಾರದಿಂದ ಯಾವುದೇ ಆರೋಗ್ಯ ಭದ್ರತೆಯನ್ನು ನೀಡಿಲ್ಲ. ಹಗಲು ರಾತ್ರಿಯೆನ್ನದೇ ದುಡಿಸಿಕೊಳ್ಳುತ್ತಿದ್ದು, ಸರಿಯಾದ ಸಂಭಾವನೆ ನೀಡುತ್ತಿಲ್ಲ. ೨ ವರ್ಷದಿಂದ ಬಾಕಿ ಇರುವ ಪ್ರೋತ್ಸಾಹಧನವನು ನೀಡಬೇಕು ಹಾಗೆಯೇ ಮಾಸಿಕ ಗೌರವಧನವನ್ನು ೧೨ ಸಾವಿರಕ್ಕೆ ನಿಗದಿಪಡಿಸಬೇಕು. ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ನೆರವೇರಿಸದಿದ್ದರೆ, ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡುವುದಾಗಿ ತಿಳಿಸಿ, ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಮಾಡಿದರು