ತುಂಗಾ ಕಾಲುವೆ ಪಕ್ಕದಲ್ಲಿ ಕಸದ ರಾಶಿ

ಹೈಲೆಟ್ಸ್ :  
ಎಲ್ಲೆಂದರಲ್ಲಿ ಕಸ, ಗಬ್ಬುನಾಥ 

ತುಂಗಾ ಕಾಲುವೆ ಪಕ್ಕದಲ್ಲಿ ಕಸದ ರಾಶಿ
 
ಇಲ್ಲಿ ಹೇಳೋರಿಲ್ಲ.. ಕೇಳೋರಿಲ್ಲ.. 

ಪುನೀತ್ ರಾಜ್‌ಕುಮಾರ್ ರಸ್ತೆ ಹೇಗಿದೆ ನೋಡಿ...? 

ಶಿವಮೊಗ್ಗ : 
ಎಲ್ಲೆಂದರಲ್ಲಿ ಕಸ.. ಕೊಚ್ಚೆ, ಮೂಗು ಮುಚ್ಚಿಕೊಂಡು ಓಡಾಡುವ ವಾತಾವರಣ... ಶಿವಮೊಗ್ಗದ ಸಿಟಿಯಲ್ಲಿ ಇಂತಹ ಸಾಕಷ್ಟು ಸ್ಥಳಗಳು ಇದ್ರೂ ಮಹಾನಗರ ಪಾಲಿಕೆಯವರು ತಲೆ ಕೆಡಿಸಿಕೊಂಡಿಲ್ಲ. ಲಕ್ಷ್ಮೀ ಟಾಕೀಸ್‌ನಿಂದ ಶರಾವತಿ ನಗರಕ್ಕೆ ಸಂಪರ್ಕ ಕಲ್ಪಿಸುವ, ತುಂಗಾ ಚಾನೆಲ್ ರಸ್ತೆಯಲ್ಲಿ ಗಬ್ಬುನಾಥ. ಜನರು ನಿತ್ಯ ಮೂಗು ಮುಚ್ಚಿಕೊಂಡು ಓಡಾಡುತ್ತಿದ್ದಾರೆ. ಇದಕ್ಕೆ ಪುನೀತ್ ರಾಜ್‌ಕುಮಾರ್ ರಸ್ತೆ ಅಂತ ನಾಮಕರಣ ಮಾಡಿದ್ದಾರೆ. ಆದ್ರೆ, ಕ್ಲೀನಿಂಗ್ ಬಗ್ಗೆ ಯಾರೊಬ್ಬರೂ ತಲೆ ಕೆಡಿಸಿಕೊಂಡಿಲ್ಲ. ಮೊದಲನಿಂದಲೂ ತುಂಗಾ ಕಾಲುವೆಗೆ ಜನರು ಕಸ ಹಾಕುತ್ತಾರೆ ಅನ್ನೋದು ಗೊತ್ತಿರೋ ವಿಚಾರ. ಆದ್ರೆ, ಮಹಾನಗರ ಪಾಲಿಕೆಯವರು ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಅಕ್ಕಪಕ್ಕದ ಜನರೇ ಕಸ ಹಾಕೋದಕ್ಕೆ ತುಂಗಾ ಕಾಲುವೆಯನ್ನು ಬಳಸಿಕೊಳ್ತಾ ಇರೋದು ದುರಂತವೇ ಸರಿ. ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಸಹ ಮಹಾನಗರ ಪಾಲಿಕೆಯವರು ಮಾಡಿಲ್ಲ.