6 ವರ್ಷದ ಒಳಗಿನವರಿಗೆ ಉಚಿತ ಪಯಾಣ 

ಶಿವಮೊಗ್ಗ : ಕೆಎಸ್‌ಆರ್‌ಟಿ ಬಸ್‌ಗಳಲ್ಲಿ ಆರು ವರ್ಷ ಮೇಲ್ಪಟ್ಟ ಮಕ್ಕಳಿಗೆ ಮಾತ್ರವೇ ಅರ್ಧ ಟಿಕೆಟ್ ಪಡೆಯುವಂತೆ ಚಾಲಕ ಮತ್ತು ನಿರ್ವಾಹಕರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಸೂಚನೆ ನೀಡಿದೆ.

ಕೆಲ ಮಕ್ಕಳ ಎತ್ತರ ನೋಡಿ ಅನುಮಾನ ಬರುವುದು ಸಹಜ. ಇಂತಹ ಮಕ್ಕಳ ದೃಢೀಕರಣ ಕೇಳಿ ಪರಿಶೀಲನೆ ನಡೆಸಬೇಕು. 6 ವರ್ಷದ ಒಳಗೆ ಇರುವ ಮಕ್ಕಳಿಗೆ ಅರ್ಧ ಟಿಕೆಟ್ ಪಡೆಯುವಂತಿಲ್ಲ ಎಂದು ಸೂಚನೆ ನೀಡಿದೆ. ಈ ಬಗ್ಗೆ ಗೊಂದಲಗಳು, ಕಂಡಕ್ಟರ್ ಜೊತೆ ಗಲಾಟೆಗಳು ನಿರಂತರವಾಗಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸರಕಾರ ಈ ಆದೇಶವನ್ನು ಹೊರಡಿಸಿದೆ. 6 ವರ್ಷದ ಒಳಗಿನ ಮಕ್ಕಳಿಗೆ ಉಚಿತ ಪ್ರಯಾಣವಿದೆ. ಉಳಿದಂತೆ 6 ರಿಂದ 12 ವರ್ಷದ ಒಳಗಿನ ಮಕ್ಕಳಿಗೆ ಅರ್ಧ ಟಿಕೆಟ್ ಪಡೆಯಬೇಕು ಎಂದು ನಿಗಮ ಸ್ಪಷ್ಟವಾದ ಸೂಚನೆ ನೀಡಿದೆ.