ಗೃಹ ಸಚಿವರಿಗೆ ಬಹಿರಂಗವಾಗಿ ಸವಾಲ್ ಹಾಕಿದ ಮಾಜಿ ಸಚಿವ ಕಿಮ್ಮನೆ ರತ್ನಾಕರ್

ಹೈಲೆಟ್ಸ್: 

ಗೃಹ ಸಚಿವ ಆರಗ ಜ್ಞಾನೇಂದ್ರ ಮನೆ ಮೇಲೂ ಸಿಬಿಐ ದಾಳಿ ಮಾಡಲಿ 

ನನ್ನ ಮನೆ ಮೇಲೂ ದಾಳಿ ನಡೆಯಲಿ 

ಬಹಿರಂಗವಾಗಿ ಸವಾಲ್ ಹಾಕಿದ ಮಾಜಿ ಸಚಿವ ಕಿಮ್ಮನೆ ರತ್ನಾಕರ್ 

ಶಿವಮೊಗ್ಗ: 

ಇಡಿ ದಾಳಿಯ ವಿಚಾರಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದಲ್ಲಿ ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಬಹಿರಂಗವಾಗಿಯೇ ಸವಾಲ್ ಹಾಕಿದ್ದಾರೆ. ಅವರ ಮನೆಯ ಮೇಲು ಸಿಬಿಐ ದಾಳಿ ನಡೆಯಲಿ. ನಮ್ಮ ಮನೆಯ ಮೇಲೂ ಸಿಬಿಐ ದಾಳಿ ನಡೆಯಲಿ ಎಂದು ಬಹಿರಂಗವಾಗಿಯೇ ಹೇಳಿದ್ದಾರೆ. ತೀರ್ಥಹಳ್ಳಿಯಲ್ಲಿ ಲೇಔಟ್ ದಂಧೆ ನಡೆಯುತ್ತಿದೆ. ಜ್ಞಾನೇಂದ್ರ ಅವರ ಮಗ ಸರಕಾರಿ ಜಮೀನನ್ನು ಖಾಸಗಿ ಜಮೀನು ಎಂದು ಹೇಳುತ್ತಿದ್ದಾರೆ. ಸ್ಯಾಂಟ್ರೋ ರವಿ ಎಲ್ಲೂ ಅಡಗಿಕೊಂಡಿಲ್ಲ.. ಇವರೇ ಅಡಗಿಸಿಟ್ಟಿದ್ದಾರೆ. ದೇಶದ ಮೊದಲ ಭಯೋತ್ಪಾದಕ ಗೂಡ್ಸೆ, ಬಿಜೆಪಿಯವರಿಗೆ ಬೇರೆ ಕೆಲಸ ಇಲ್ಲ. ಈಗ ಕುಕ್ಕರ್ ಹಿಡಿದುಕೊಂಡು ಓಡಾಡುತ್ತಿದ್ದಾರೆ ಎಂದು ತೀವ್ರ ವಾಗ್ದಾಳಿಯನ್ನು ಕಿಮ್ಮನೆ ರತ್ನಾಕರ್ ಅವರು ನಡೆಸಿದರು.