ಗಾಳಿ ರಭಸಕ್ಕೆ ಶಾಲೆ ಹೆಂಚುಗಳು ಚೆಲ್ಲಾಪಿಲ್ಲಿ 

ಉಂಬ್ಳೇಬೈಲು : ಭಾನುವಾರ ರಾತ್ರಿ ಜಿಲ್ಲೆಯ ವಿವಿಧೆಡೆ ಭಾರಿ ಮಳೆಯಾಗಿದೆ. ಸಂಜೆಯಿಂದಲೇ ಮೋಡ ಕವಿದ ವಾತಾವರಣವಿದ್ದು, ಹಲವೆಡೆ ಗುಡುಗು ಸಹಿತ ಮಳೆ ಸುರಿದಿದೆ. ಶಿವಮೊಗ್ಗ ತಾಲೂಕಿನ ಉಂಬ್ಳೇಬೈಲಿನಲ್ಲಿ ಭಾನುವಾರ ಭಾರಿ ಗಾಳಿ-ಮಳೆಯಾಗಿದೆ.

ಗಾಳಿಯ ರಭಸಕ್ಕೆ ಅಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹೆಂಚುಗಳು ಚೆಲ್ಲಾಪಿಲ್ಲಿಯಾಗಿದೆ. ಮಳೆಯಿಂದಾಗಿ ಶಾಲೆಗೆ ಹಾನಿಯಾಗಿದೆ. ಈ ಸಂಬಂಧ ಜನಪ್ರತಿನಿಧಿಗಳಿಗೆ ಮಾಹಿತಿ ನೀಡಲಾಗಿದೆ. ಆದರೂ ಕೂಡ ಯಾರೊಬ್ಬರು ಬಂದು ಸ್ಥಳ ಪರಿಶೀಲನೆ ಮಾಡಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.