ಶಿವಮೊಗ್ಗ : ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಮತ್ತು ಕೇಸರಿ ಸಂಘರ್ಷ ವಿಚಾರ ದಿನೇ ದಿನೇ ನಾನಾ ತಿರುವುಗಳನ್ನ ಪಡೆಯುತ್ತಿದೆ. ಹೈಕೋರ್ಟ್ ಮಧ್ಯಂತರ ಆದೇಶದ ಹೊರತಾಗಿಯೂ ಕೆಲ ವಿದ್ಯಾರ್ಥಿಗಳು ಹಿಜಾಬ್ ಹಾಕಿಕೊಂಡು ಬರ್‍ತಾ ಇದ್ದಾರೆ.
ಹೀಗಾಗಿ ನಗರದ ಎಲ್ಲಾ ಕಾಲೇಜುಗಳ ಗೇಟಿನಲ್ಲಿ, ಕಾಲೇಜುಗಳಲ್ಲಿ ಹಿಜಾಬ್ ಹಾಗೂ ಕೇಸರಿ ಶಾಲುಗಳನ್ನು ನಿಷೇಧಿಸಿರುವುದಾಗಿ ಫ್ಲೆಕ್ಸ್ ಅಳವಡಿಕೆ ಮಾಡಲಾಗಿದೆ. ಹೈಕೋರ್ಟ್ ಮಧ್ಯಂತರ ಆದೇಶ ಹೊರಡಿಸಿದೆ. ಈ ಪ್ರಕಾರ ಹಿಜಾಬ್, ಕೇಸರಿ ಶಾಲು ಹಾಗೂ ಧಾರ್ಮಿಕ ಧ್ವಜಗಳನ್ನ ತರಗತಿಗಳಿಗೆ ತರುವುದನ್ನ ಮುಂದಿನ ಆದೇಶದವರೆಗೆ ನಿಷೇಧಿಸಲಾಗಿದೆ ಎಂದು ಮಾಹಿತಿ ನೀಡಲಾಗಿದೆ.