ಬ್ಯಾಂಕಿನಲ್ಲಿ ಬೆಂಕಿ : ಹಣಕ್ಕೆ ಹಾನಿಯಾಗಿಲ್ಲ

ಶಿವಮೊಗ್ಗ : ಇಲ್ಲಿನ ಗಾರ್ಡನ್ ಏರಿಯಾದಲ್ಲಿರುವ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ಆಕಸ್ಮಿಕ ಬೆಂಕಿ ಅವಘಡ ಉಂಟಾಗಿದೆ. ಬೆಳಗ್ಗೆ ೯.೧೫ರ ಸುಮಾರಿಗೆ ಬ್ಯಾಂಕ್ ಸ್ವಚ್ಛಗೊಳಿಸುವ ಸಿಬ್ಬಂದಿ ಬ್ಯಾಂಕಿಗೆ ಬಂದಾಗ ಬೆಂಕಿಯನ್ನ ಗಮನಿಸಿದ್ದಾರೆ. ತಕ್ಷಣವೇ ಅಗ್ನಿಶಾಮಕ ದಳದ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದವರು ಬೆಂಕಿಯನ್ನ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅಂದ್ಹಾಗೆ ಬ್ಯಾಂಕಿನ ದಾಖಲೆಗಳನ್ನ ಇಡುವ ಕೊಠಡಿಗೆ ತಗುಲಿದು ದಾಖಲೆಗಳಿಗೆ ಹಾನಿಯಾಗಿದೆ. ಆದ್ರೆ ಸ್ಟ್ರಾಂಗ್ ರೂಂಗೆ ಯಾವುದೇ ತೊಂದರೆ ಉಂಟಾಗಿಲ್ಲ. ಹೀಗಾಗಿ ಬ್ಯಾಂಕಿನಲ್ಲಿದ್ದ ಹಣಕ್ಕೆ ಕೂಡ ಯಾವುದೇ ಹಾನಿಯಾಗಿಲ್ಲ.