ಸುಲ್ತಾನ್ ಮಾರ್ಕೆಟ್‌ನಲ್ಲಿ ಅಗ್ನಿ ಅವಘಡ 

ಶಿವಮೊಗ್ಗ : ನಗರದ ಸುಲ್ತಾನ್ ಮಾರ್ಕೆಟ್‌ನಲ್ಲಿ ಬುಧವಾರ ರಾತ್ರಿ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿಯ ಕಾರ್ಯಾಚರಣೆಯಿಂದಾಗಿ ದೊಡ್ಡ ಅವಘಡವೊಂದು ತಪ್ಪಿದೆ.

ಮಾರ್ಡನ್ ಟಾಕೀಸ್ ಹಿಂಭಾದಲ್ಲಿರುವ ಗುಜರಿ ಅಂಗಡಿಗಳಿಗಳಲ್ಲಿ ಇಡಲಾಗಿದ್ದ ಟಯರ್ ಹಾಗೂ ಇನ್ನಿತರ ವಸ್ತುಗಳಿಗೆ ಬೆಂಕಿ ತಾಗಿದ್ದು, ಹೊತ್ತಿ ಉರಿದಿವೆ. ಇದನ್ನ ಗಮನಿಸಿದ ಸ್ಥಳೀಯರು ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ದೊಡ್ಡ ಅನಾಹುತವೊಂದನ್ನ ತಪ್ಪಿಸಿದ್ದಾರೆ.

ಅಂದ್ಹಾಗೆ, ಗುಜರಿ ವಸ್ತುಗಳನ್ನ ಇರಿಸಿದ್ದ ಸ್ಥಳದ ಹತ್ತಿರ ಟ್ರಾನ್ಸ್‌ಫಾರ್ಮರ್ ಕೂಡ ಇದೆ. ಇದರಿಂದ ಕಿಡಿ ಬಿದ್ದು ಬೆಂಕಿ ಹೊತ್ತಿಕೊಂಡಿರಬಹುದು ಅಥವಾ ಯಾರೋ ಕಿಡಿಗೇಡಿಗಳು ಈ ಕೃತ್ಯ ಎಸಗಿರಬಹುದು ಎಂಬ ಶಂಕೆ ವ್ಯಕ್ತವಾಗ್ತಾಯಿದೆ. ಆದ್ರೆ, ಅಗ್ನಿ ಅವಘಡಕ್ಕೆ ನಿಖರ ಕಾರಣ ಏನೆಂದು ತನಿಖೆಯ ನಂತರವಷ್ಟೇ ತಿಳಿದು ಬರಬೇಕದೆ.