ಶಿರಾಳಕೊಪ್ಪ : ಹೆಣ್ಣು ಮಕ್ಕಳೇ ಎಚ್ಚರ.. ಸೋಷಿಯಲ್ ಮೀಡಿಯಾದಲ್ಲಿ ಅಪರಿಚಿತರ ಸ್ನೇಹ ಮಾಡಿಕೊಳ್ಳುವ ಗೋಜಿಗೆ ದಯವಿಟ್ಟು ಹೋಗಬೇಡಿ. ಹೌದು, ಸೋಷಿಯಲ್ ಮೀಡಿಯಾದಿಂದಲೇ ಕಾಮುಕನ ಕಾಟಕ್ಕೆ ಹೆದರಿದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರು ಘಟನೆ ಶಿರಾಳಕೊಪ್ಪದಲ್ಲಿ ನಡೆದಿದೆ.
ಇನ್ಸ್‌ಟಾಗ್ರಾಮ್‌ನಲ್ಲಿ ಅಪರಿಚಿತ ಯುವಕನೊಬ್ಬ ಯುವತಿಗೆ ಆಕೆಯ ನಗ್ನ ಫೋಟೋವನ್ನು ಕಳುಹಿಸುವಂತೆ ವಿಡಿಯೋ ಕಾಲ್ ಮೂಲಕ ಒತ್ತಾಯಿಸಿದ್ದಾನೆ. ಇಲ್ಲವಾದಲ್ಲಿ ನಿನ್ನ ಫೋಟೋವನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡುವ ಬೆದರಿಕೆ ಹಾಕಿದ್ದಾನೆ. ಅಲ್ಲದೆ ಹುಡುಗಿಯ ವಿಡಿಯೋ ರೆಕಾರ್ಡ್ ಮಾಡಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡುತ್ತೇನೆ ಎಂದು ಹೆದರಿಸಿದ್ದಾನೆ.
ಬಳಿಕ ಆ ನೊಂದ ಯುವತಿ ಈ ಎಲ್ಲಾ ವಿಚಾರವನ್ನು ತನ್ನ ತಂದೆ ಬಳಿ ಹೇಳಿಕೊಂಡಿದ್ದಾಳೆ. ಆಕೆಗೆ ಧೈರ್ಯ ತುಂಬಿದ ತಂದೆ ಪೊಲೀಸ್ ದೂರು ನೀಡಲು ಮುಂದಾಗಿದ್ದಾರೆ. ಆದ್ರೆ, ರೂಂಗೆ ಹೋದ ಆಕೆ ವಾಪಸ್ ಬರಲೇ ಇಲ್ಲ. ನೇಣು ಬಿಗಿದುಕೊಂಡು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.