ಶಿವಮೊಗ್ಗ : ಕಾಡಾ ಅಧ್ಯಕ್ಷೆ ಪವಿತ್ರ ರಾಮಯ್ಯ ಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ಹರಿಹರ ತಾಲ್ಲೂಕು ಮಲೆಬೆನ್ನೂರಿನಲ್ಲಿರುವ ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರರ ಕಚೇರಿಗೆ ಭೇಟಿ ನೀಡಿ ಸಭೆ ನಡೆಸಿದರು.
ಕಳೆದ 5 ದಿನಗಳ ಹಿಂದೆ ಲಕ್ಕವಳ್ಳಿ ಬಳಿಯ ನಾಲೆಗೆ ವ್ಯಕ್ತಿಯೊಬ್ಬ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ. ಆತನ ಮೃತದೇಹ ತೆಗೆಯುವ ಸಲುವಾಗಿ ಬಲ ದಂಡೆಗೆ ಹರಿಸುತ್ತಿದ್ದ ನೀರಿನ ಪ್ರಮಾಣವನ್ನ ಕಡಿಮೆ ಮಾಡಲಾಗಿದೆ ಹಾಗೂ ವಿದ್ಯುತ್ ಉತ್ಪಾದನಾ ಕೇಂದ್ರದಲ್ಲಿ ಎದುರಾದ ತಾಂತ್ರಿಕ ಅಡಚಣೆಯ ಕಾರಣದಿಂದಾಗಿ ಭದ್ರಾ ಅಚ್ಚುಕಟ್ಟಿನ ಕೊನೆಯಂಚಿನ ತಾಲ್ಲೂಕುಗಳ ರೈತರ ಜಮೀನಿಗೆ ನೀರು ತಲುಪುತ್ತಿಲ್ಲ.
ಇದರಿಂದಾಗಿ ಭತ್ತ ನಾಟಿ ಮಾಡುವ ರೈತರಿಗೆ ಸಮಸ್ಯೆ ಆಗುತ್ತಿದೆ. ಈ ವಿಚಾರವಾಗಿ ಸಭೆ ನಡೆಸಿರುವ ಕಾಡಾ ಅಧ್ಯಕ್ಷೆ, ಎಲ್ಲರ ಅಭಿಪ್ರಾಯ ಸಂಗ್ರಹಿಸಿ ರೊಟೇಷನ್ ಅವಧಿಯನ್ನು ಎರಡು ದಿನದ ಮಟ್ಟಿಗೆ ಹೆಚ್ಚಿಸಬೇಕು, ಈ ಮೂಲಕ ರೈತರಿಗೆ ಅನುಕೂಲ ಮಾಡಿಕೊಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಹಾಗೇ ರೈತರು ಯಾವುದೇ ಕಾರಣಕ್ಕೂ ಧೃತಿಗೆಡಬಾರದು ಕಳೆದ ಬಾರಿಯಂತೆ ಈ ಬಾರಿಯೂ ನೀರು ಕೊಟ್ಟೆ ಕೊಡುತ್ತೇನೆ ಎಂದ ಆಶ್ವಾಸನೆ ನೀಡಿದರು.