ಇರುವಕ್ಕಿಯಲ್ಲಿ ರೈತರ ಪ್ರತಿಭಟನೆ : ಚರ್ಚೆಗೆ ಕಾರಣವಾಯಿತು ಶಾಸಕರ ನಡೆ 

ಸಾಗರ : ಇಲ್ಲಿನ ಇರುವಕ್ಕಿಯಲ್ಲಿ ಹಲವು ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ರೈತರನ್ನು ಒಕ್ಕಲೆಬ್ಬಿಸಲು, ಇರುವಕ್ಕಿ ಕೃಷಿ ವಿ.ವಿ ಅಧಿಕಾರಿಗಳು, ರೈತರ ಸಾಗುವಳಿ ಜಮೀನು ಹಾಗೂ ಸ್ಮಶಾನದ ಜಾಗಕ್ಕೆ ಬೇಲಿ ಹಾಕಿ, ಬೆಳೆಗಳನ್ನು ನಾಶ ಮಾಡಿರುವುದನ್ನ ಖಂಡಿಸಿ ಸೋಮವಾರ ಅಲ್ಲಿನ ರೈತರು ಪ್ರತಿಭಟನೆ ನಡಿಸಿದರು.

ಈ ವೇಳೆ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಹರತಾಳು ಹಾಲಪ್ಪ, ಬೇಲಿಯನ್ನು ತೆರವು ಗೊಳಿಸಿ, ಜಿಲ್ಲಾಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಈ ವಿಷಯದ ಕುರಿತಾಗಿ ಮಾತನಾಡಿದರು. ನಂತರ ಸದರಿ ಜಾಗದ ವಿವಾದದ ಬಗ್ಗೆ ಸ್ಥಳೀಯರು, ಸಂಬಂಧಪಟ್ಟ ಅಧಿಕಾರಿಗಳ ಸಮ್ಮುಖದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳುವವರೆಗೂ ಇನ್ನೆಂದು ಇಂತಹ ಘಟನೆ ಮರುಕಳಿಸದಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಸೂಚಿಸಿದರು.

ಅಂದ್ಹಾಗೆ ಇರುವಕ್ಕಿಯಲ್ಲಿ ಕೃಷಿ ವಿವಿ ನಿರ್ಮಾಣ ಮಾಡಲು ಸರ್ಕಾರ 777 ಎಕರೆ ಭೂಮಿಯನ್ನ ನೀಡಿದ್ದು ಇಷ್ಟು ಭೂಮಿಯೇ ಸಾಕಾಗುವುದಿಲ್ಲ ಎಂದು ಹೇಳಲಾಗುತ್ತಿದೆ. ಆದ್ರೇ ಇದೀಗ ಸರ್ಕಾರ ನೀಡಿರುವ 777 ಎಕರೆ ಭೂಮಿಯಲ್ಲಿಯೇ ಅತಿಕ್ರಮಣ ಮಾಡಿರುವವರ ಬೆಂಬಲಕ್ಕೆ ಶಾಸಕರು ನಿಂತಿರುವುದು ತೀವೃ ಚರ್ಚೆಗೆ ಕಾರಣವಾಗಿದೆ.