ಆಯನೂರು : ಆಯನೂರು ಸಮೀಪದ ಚೆನ್ನಹಳ್ಳಿ ಗ್ರಾಮದಲ್ಲಿ ಆರು ತಿಂಗಳಿನಿಂದ ನಿತ್ಯವು ಒಂದಲ್ಲ ಒಂದು ಕಡೆ ರೈತರ ಬೆಳೆಗಳ ಮೇಲೆ ಕಾಡಾನೆ ದಾಳಿ ಮಾಡ್ತಾನೆ ಇದೆ.
ಮಂಗಳವಾರದಂದು ಆನೆ ದಾಳಿಯಿಂದಾಗಿ ಪಾಲಕ್ಷಪ್ಪ ಎಂಬುವವರ ಅಡಿಕೆ ಹಾಗೂ ಬಾಳೆ, ಪಾಲಾಕ್ಷಪ್ಪ ಎಂಬುವವರ ಬಾಳೆ ಹಾಗೂ ಶಿವಪ್ಪ ಎಂಬುವವರ ಭತ್ತ ಸೇರಿದಂತೆ ಹಲವು ರೈತರ ಬೆಳೆಗಳಿಗೆ ಹಾನಿಯಾಗಿದೆ. ಹಲವು ವರ್ಷಗಳಿಂದ ರೈತರು ಕಷ್ಟಪಟ್ಟು ಬೆಳೆದಿದ್ದ ಬೆಳೆಗಳಿಗೆ, ಆನೆ ಕ್ಷಣಾರ್ಧದಲ್ಲಿ ಹಾನಿ ಮಾಡಿದೆ.
ಆರು ತಿಂಗಳಿನಿಂದ ಇಲ್ಲಿನ ರೈತರು ಆನೆ ಕಾಟದಿಂದ ಸಂಕ್ಷಟದಲ್ಲಿದ್ದಾರೆ. ಇಲ್ಲಿನ ಅರಣ್ಯ ಇಲಾಖೆಯವರು ಆಗಾಗ ಆನೆಯನ್ನ ಹೆದರಿಸಿ ಕಳಿಸ್ತಾ ಇದ್ದಾರೆಯೆ ವಿನಃ, ಇದಕ್ಕೆ ಯಾವುದೇ ಶಾಶ್ವತ ಪರಿಹಾರ ದೊರಕಿಸಿಕೊಡುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.