ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅಸಮಾಧಾನ ಸ್ಫೋಟ

ಹೈಲೆಟ್ಸ್ : 

ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅಸಮಾಧಾನ ಸ್ಫೋಟ
ಸಚಿವರಾಗಲು ನಾನು ಸಿದ್ಧನಿದ್ದೇನೆ
ಆರೋಪ ಮುಕ್ತನಾದ ಮೇಲೆ ಸಚಿವ ಸ್ಥಾನದ ಭರವಸೆ 
ಸಿಎಂ, ರಾಜ್ಯಾಧ್ಯಕ್ಷರು, ಬಿಎಸ್‌ವೈ ಮಾತು ಕೊಟ್ಟಿದ್ರು


ಶಿವಮೊಗ್ಗ : ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬದ ದಿನವೇ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅಸಮಾಧಾನ ಸ್ಫೋಟವಾಗಿದೆ. ಈಗಾಗಲೇ ಅಧಿವೇಶನ ಸೇರಿದಂತೆ ಸರ್ಕಾರದ ಅನೇಕ ಕಾರ್ಯಕ್ರಮಗಳಿಂದ ಅಂತರ ಕಾಯ್ದುಕೊಂಡಿದ್ದ ಕೆಎಸ್‌ಈ,  ಸಚಿವ ಸ್ಥಾನದ ವಿಚಾರವಾಗಿ ರಾಜ್ಯ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ನಾನು ಆರೋಪ ಮುಕ್ತನಾದ ಮೇಲೆ ಸಚಿವ ಸ್ಥಾನ ನೀಡುವುದಾಗಿ ಹೇಳಿದ್ದರು. ಸಿಎಂ, ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಬಿಎಸ್‌ವೈ ಮಾತು ಕೊಟ್ಟಿದ್ರು. ಆದ್ರೀಗ ಸಚಿವ ಸ್ಥಾನವನ್ನು ಯಾಕೆ ಕೊಟ್ಟಿಲ್ಲ ಎಂದು ಅವರನ್ನೇ ಕೇಳಬೇಕು. ಸಚಿವರಾಗಲು ನಾನು ಸಿದ್ಧನಿದ್ದೇನೆ.  ಅದಕ್ಕಾಗಿ ಯಾರನ್ನೂ ಸಂಪರ್ಕಿಸಿಲ್ಲ, ಸಂಪರ್ಕಿಸುವುದೂ ಇಲ್ಲ ಎಂದು ಬಹಿರಂಗವಾಗಿಯೇ ಮತ್ತೊಮ್ಮೆ ಕೆ.ಎಸ್.ಈಶ್ವರಪ್ಪ ಅಸಮಾಧಾನ ಹೊರಹಾಕಿದ್ದಾರೆ. ಹಾಗೇನೆ ಇದೇ ವೇಳೆ ಸಚಿವಗಿರಿ ನೀಡಿಲ್ಲ ಅಂತ ಸಂಘಟನೆಗೆ ತೊಂದರೆ ಮಾಡಲ್ಲ. ರಾಜೀನಾಮೆಗೂ ಸಂಘಟನೆಗೂ ಸಂಬಂಧವಿಲ್ಲ. ಹಿಂದುಳಿದ ವರ್ಗದ ಮತವನ್ನು ಕ್ರೋಢೀಕರಿಸುವ ನಿಟ್ಟಿನಲ್ಲಿ ನಾನು ಕೆಲಸ ಮಾಡಲಿದ್ದೇನೆ ಎಂತಲೂ ಈಶ್ವರಪ್ಪ ಹೇಳಿದರು.