ನಿರಂತರ ವಿದ್ಯುತ್ ಯೋಜನೆಯಲ್ಲಿನ ಅವ್ಯಾವಹಾರ ಆರೋಪಕ್ಕೆ ಸಾಕ್ಷಿ

ಶಿವಮೊಗ್ಗ : ಜನವರಿ 1ರಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ನಿರಂತರ ಜ್ಯೋತಿ ವಿದ್ಯುತ್ ಯೋಜನೆ ಅನುಷ್ಠಾನದ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದರು. ಈ ವೇಳೆ ಯೋಜನೆಯಲ್ಲಿ ಹಲವಾರು ಅವ್ಯವಹಾರಗಳಾಗಿದ್ದು, ಅಂತಹ ಅಧಿಕಾರಿಗಳ ವಿರುದ್ಧ ಎಸಿಬಿ ತನಿಖೆ ನಡೆಸಲಾಗುವುದು ಎಂದು ಹೇಳಿದ್ದರು.

ಇದೀಗ ಈ ಯೋಜನೆಗೆ ಸಂಬಂಧಪಟ್ಟ ಅನೇಕ ವಸ್ತುಗಳನ್ನ ಮಲವಗೊಪ್ಪದ ಗೋಡೌನ್ ಒಂದರಲ್ಲಿ ಇಟ್ಟಿರುವುದಾಗಿ ಸಚಿವ ಕೆ.ಎಸ್.ಈಶ್ವರಪ್ಪ ಮಾಹಿತಿ ನೀಡಿದ್ದಾರೆ. ಈ ಕುರಿತಾಗಿ ಮಾತನಾಡಿದ ಅವರು, ಶನಿವಾರ ಕೆಇಬಿ ಅಧಿಕಾರಿಗಳು ಮಲವಗೊಪ್ಪದ ಗೋಡೌನ್ ಮೇಲೆ ದಾಳಿ ಮಾಡಿದ್ದರು. ಈ ವೇಳೆ ನಿಮ್ಮದಲ್ಲದ ಎಷ್ಟು ವಸ್ತಗಳು ಅಲ್ಲಿವೆ ಎಂದು ಮಾಹಿತಿ ನೀಡುವಂತೆ ಹೇಳಿದ್ದೆ. ಇದೀಗ ಅಲ್ಲಿ ಹೆಚ್ಚುವರಿಯಾಗಿ ಕೆಲವು ಸಾಮಾಗ್ರಿಗಳು ಇರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.