ಶಿವಮೊಗ್ಗ : ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಬೆನ್ನೆಲ್ಲೆ ಆತನ ಕುಟುಂಬಕ್ಕೆ ಕೋಟಿ ಕೋಟಿ ಆರ್ಥಿಕ ನೆರವು ಹರಿದು ಬಂದಿತ್ತು. ಅಷ್ಟೊಂದು ಹಣವನ್ನು ಹರ್ಷನ ಮನೆಯವರು ಏನ್ ಮಾಡ್ತಾರೆ ಎಂಬ ಪ್ರಶ್ನೆ ಸಾಮಾನ್ಯ ಜನರಲ್ಲಿ ಮೂಡಿತ್ತು. ಇದಕ್ಕೀಗ ಉತ್ತರ ಸಿಕ್ಕಿದೆ. ಹರ್ಷನಂತೆ ಕೊಲೆಯಾದವರ ಕುಟುಂಬಗಳಿಗೆ ನೆರವಾಗಲು, ಆರ್ಥಿಕವಾಗಿ, ಸಾಮಾಜಿಕವಾಗಿ ನೊಂದವರಿಗೆ ಸಹಾಯ ಮಾಡಲು ಹರ್ಷ ಕುಟುಂಬ ಮುಂದಾಗಿದೆ. ಹರ್ಷನ ಹತ್ಯೆಯಾದ ಬಳಿಕ ಸಂಗ್ರಹವಾದ ಹಣದಲ್ಲಿ ಹರ್ಷ ಚಾರಿಟೇಬೆಲ್ ಟ್ರಸ್ಟ್ ಸ್ಥಾಪನೆಯಾಗಲಿದೆ.
ಆರ್ಥಿಕ ಕಾರಣಕ್ಕೆ ವಿದ್ಯಾಭ್ಯಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿರುವ ವಿದ್ಯಾರ್ಥಿಗಳ ವಿದ್ಯಾಭ್ಯಾಸ, ಆಸ್ಪತ್ರೆಯ ಚಿಕಿತ್ಸಾ ವೆಚ್ಚ ಭರಿಸಲಾಗದೇ ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬಗಳು ಹಾಗೂ ಗೋವಿನ ಆರೈಕೆಯಲ್ಲಿ ತೊಡಗಿಕೊಂಡಿರುವ ಗೋಶಾಲೆಗಳಿಗೆ ನೆರವಾಗುವುದು ಈ ಟ್ರಸ್ಟ್‌ನ ಉದ್ದೇಶ. ಹರ್ಷನ ಸಹೋದರಿ ಅಶ್ವಿನಿ ಟ್ರಸ್ಟ್‌ನ ಅಧ್ಯಕ್ಷೆಯಾಗಿ, ಮತ್ತೊಬ್ಬ ಸಹೋದರಿ ರಜನಿ ಉಪಾಧ್ಯಕ್ಷೆಯಾಗಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಕೆ.ಈ.ಕಾಂತೇಶ್ ವ್ಯವಸ್ಥಾಪಕ ಟ್ರಸ್ಟಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಒಟ್ಟಾರೆ ನೊಂದವರ ದನಿಯಾಗಿ ಟ್ರಸ್ಟ್ ಕಾರ್ಯನಿರ್ವಹಿಸಲಿದೆ ಎಂದು ಕೆ.ಈ.ಕಾಂತೇಶ್ ಮಾಧ್ಯಮಗೊಷ್ಠಿ ನಡೆಸಿ ಮಾಹಿತಿ ನೀಡಿದರು.