ಶಿವಮೊಗ್ಗ : ಮಹಾನಗರ ಪಾಲಿಕೆ ವ್ಯಾಪ್ತಿಯ ಮಲವಗೊಪ್ಪದಲ್ಲಿ ಪಾಲಿಕೆ ಆಡಳಿತವು ಪೊಲೀಸ್ ಕಣ್ಗಾವಲಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿತು.
ಮಲವಗೊಪ್ಪದ ಆರ್‌ಟಿಓ ಕಚೇರಿ ಸಮೀಪ ಉದ್ಯಾನವನಕ್ಕೆ ಮೀಸಲಿಟ್ಟಿದ್ದ ಪಾಲಿಕೆಗೆ ಸೇರಿದ ಜಾಗವನ್ನು ಕೆಲವರು ಒತ್ತುವರಿ ಮಾಡಿಕೊಂಡು ಬೇಲಿ ಹಾಗೂ ಶೆಡ್ ಹಾಕಿಕೊಂಡಿದ್ದರು.ಈ ಹಿನ್ನೆಲೆಯಲ್ಲಿ ಜೆಸಿಬಿ ಮೂಲಕ ತಂತಿ ಬೇಲಿ ಹಾಗೂ ಶೆಡ್‌ನ್ನು ಪಾಲಿಕೆ ಆಡಳಿತ ತೆರವುಗೊಳಿಸಿತು.
ಈ ಜಾಗದಲ್ಲಿ ಉದ್ಯಾನವನ ಅಥವಾ ಶಾಲೆಯನ್ನು ನಿರ್ಮಿಸಬೇಕೆಂದು ಸ್ಥಳಿಯರು ಆಗ್ರಹಿಸಿದ್ದಾರೆ.