ಹೈಲೆಟ್ಸ್:
ತೀರ್ಥಹಳ್ಳಿಯ ಕುರುವಳ್ಳಿಯಲ್ಲಿ ಆನೆ ಪತ್ತೆ
ಸುತ್ತಲಿನ ಜನರಲ್ಲಿ ಶುರುವಾಯ್ತು ಆತಂಕ
ಪಟ್ಟಣದ ಸಮೀಪವೇ ಕಾಣಿಸಿಕೊಂಡ ಕಾಡಾನೆ
ಶಿವಮೊಗ್ಗ:
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿ ಕಾಡಾನೆಗಳು ಕಾಣಿಸಿಕೊಂಡಿದೆ. ಈ ದಿನ ಬೆಳಗಿನ ಜಾವ ತೀರ್ಥಹಳ್ಳಿಯ ಪೇಟೆ ಸಮೀಪವೇ ಕಾಡಾನೆಯೊಂದು ಕಾಣಿಸಿಕೊಂಡಿದೆ. ಪಟ್ಟಣದ ಕುರುವಳ್ಳಿಯ ತುಂಗಾ ನದಿಯಲ್ಲಿ ಆನೆಯೊಂದು ಕಾಣಿಸಿಕೊಂಡು ಸುತ್ತಲಿನ ಗ್ರಾಮದಲ್ಲಿ ಆತಂಕ ಮಾಡುವಂತೆ ಮಾಡಿದೆ. ಕಳೆದ ರಾತ್ರಿ ಮೇಳಿಗೆ ಬಳಿ ಕಾಣಿಸಿಕೊಂಡಿದ್ದ ಆನೆ, ಇದೀಗ ಕುರುವಳ್ಳಿಯಲ್ಲಿ ಕಾಣಿಸಿಕೊಂಡಿದೆ. ನಾಗರಕಟ್ಟೆ ಹತ್ತಿರ ತುಂಗಾನದಿಗೆ ಇಳಿದಿದ್ದ ಆನೆಯು ಎನ್‌ಆರ್‌ಪುರದಿಂದ ಬಂದಿರಬಹುದು ಎಂದು ಶಂಕಿಸಲಾಗಿದೆ. ಅರಣ್ಯ ಇಲಾಖೆಯವರು ಆನೆ ಹುಡುಕಾಟದಲ್ಲಿ ತೊಡಗಿದ್ದು, ಆನೆಯ ಸುಳಿವು ಸಿಕ್ಕಿಲ್ಲ.