ಬೀದಿಬದಿ ವ್ಯಾಪಾರಿಗಳಿಗೆ ಖಡಕ್ ವಾರ್ನ್ ಮಾಡಿದ ಡಿವೈಎಸ್‌ಪಿ 

ಶಿವಮೊಗ್ಗ : ಫುಟ್‌ಪಾತ್ ಮಾಡಿರುವುದು ಜನರು ಸರಾಗವಾಗಿ ಓಡಿಸುವುದಕ್ಕಾಗಿಯೇ ಹೊರತು ನಿಮ್ಮ ಗೂಡು ಅಂಗಡಿ, ನಾಮಫಲಕ ಇಡಲು ಅಲ್ಲ ಎಂದು ಡಿವೈಎಸ್‌ಪಿ ಪ್ರಶಾಂತ್ ಮೊನವಳ್ಳಿ ಖಡಕ್ ಆಗಿ ವಾರ್ನ್ ಮಾಡಿದ್ದಾರೆ.

ಡಿವೈಎಸ್‌ಪಿ ಕಚೇರಿ ಆವರಣದಲ್ಲಿ ಬೀದಿಬದಿ ವ್ಯಾಪಾರಿಗಳನ್ನು ಕರೆಸಿಕೊಂಡ ಡಿವೈಎಸ್‌ಪಿ ಪ್ರಶಾಂತ್, ಎಲ್ಲೆಂದರಲ್ಲಿ ತಳ್ಳುಗಾಡಿ ನಿಲ್ಲಿಸುವುದು, ರಸ್ತೆಗೆ ಚೇರ್ ಇಡುವುದು, ತಿಂಡಿ ತಿನಿಸು ಗಾಡಿಯವರು ತಮ್ಮ ಜಾಗ ಸ್ವಚ್ಛ ಮಾಡದೆ ಎಲ್ಲಾ ಎಂಜಲು ದಾರಿಯಲ್ಲಿ ಸುರಿದು ಹೋಗುತ್ತಿದ್ದಾರೆ. ಅದನ್ನು ತಿನ್ನಲು ಹಂದಿ, ನಾಯಿ, ಬಂದು ರಸ್ತೆಗಳಲ್ಲಿ ಕಿತ್ತಾಡಿ ವಾಹನಗಳಿಗೆ ಅಡ್ಡ ಬಂದು ಅನಾಹುತಗಳಾಗುತ್ತಿವೆ. ಹೀಗಾಗಿ ನಗರದಲ್ಲಿ ಸಾರ್ವಜನಿಕರ ಓಡಾಟಕ್ಕೆ ತೊಂದರೆ ನೀಡುವಂತೆ ನಾಮಫಲಕಗಳು, ಇತರೆ ಸಾಮಾಗ್ರಿಗಳನ್ನ ಇಟ್ಟು ಫುಟ್‌ಪಾತ್ ಆಕ್ರಮಿಸಿಕೊಂಡ ಯಾವ ವ್ಯಕ್ತಿಯಾದರು ಸರಿಯೇ, ಆವರ ವಸ್ತುಗಳನ್ನು ವಶಪಡಿಸಿಕೊಂಡು ದಂಡ ವಿಧಿಸಲಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಟ್ರಾಫಿಕ್ ಇನ್ಸ್‌ಪೆಕ್ಟರ್ ಸಿದ್ದೇಗೌಡ, ಬೀದಿಬದಿಯ ವ್ಯಾಪಾರಿಗಳು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.