ಶಿವಮೊಗ್ಗ : ಹಿರಿಯ ಸಾಹಿತಿ ಡಾ. ನಾ.ಡಿಸೋಜ ಅವರಿಗೆ ೮೫ ವರ್ಷ ಪೂರ್ಣಗೊಳ್ಳುತ್ತಿರುವ ಸಂದರ್ಭದಲ್ಲಿ ಅವರ ಬದುಕು, ಬರಹ ಪ್ರತಿಬಿಂಬಿಸುವ ಸಲುವಾಗಿ ಡಾ. ನಾ.ಡಿಸೋಜ ಸಾಹಿತ್ಯೋತ್ಸವ ಹಾಗೂ ವಿಚಾರ ಸಂಕಿರಣ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕುರಿತು ಮಾಧ್ಯಮಗೋಷ್ಠಿ ನಡೆಸಿ ಮಾತನಾದ ಶಿಕಾರಿಪುರ ಜನಸ್ಪಂದನ ಟ್ರಸ್ಟ್‌ನ ಬಿ.ಎನ್.ಸುನೀಲ್ ಕುಮಾರ್, ಡಿಸೋಜ ಅವರಿಗೆ 85 ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕುವೆಂಪು ರಂಗಮಂದಿರದಲ್ಲಿ ಫೆಬ್ರವರಿ ಎರಡನೇ ವಾರದಂದು ಡಾ. ನಾ.ಡಿಸೋಜ ಸಾಹಿತ್ಯೋತ್ಸವ ಹಾಗೂ ವಿಚಾರ ಸಂಕಿರಣ ಕಾರ್ಯಕ್ರಮ ಆಯೋಜಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ನಾ.ಡಿಸೋಜ ಬರೆದಿರುವ ಕಾದಂಬರಿಗಳ ಸಮಗ್ರ ಸಂಪುಟವಾದ ನಾಡಿ ಮಿಡಿತ ಪುಸ್ತಕ ಬಿಡುಗಡೆಯಾಗಲಿದೆ. 9 ಸಂಪುಟಗಳಲ್ಲಿ ಬಿಡುಗಡೆಯಾಗಲಿರುವ ಈ ಪುಸ್ತಕಗಳ ಬೆಲೆ 5885ರೂಪಾಯಿಯಾಗಿದ್ದು, ಮೊದಲ ನೂರು ಓದುಗರಿಗೆ ರಿಯಾಯಿತಿ ದರದಲ್ಲಿ 4800 ರೂಪಾಯಿಗಳಿಗೆ ಸಿಗಲಿದೆ. ನಾ.ಡಿಸೋಜ ಅವರ ಬದುಕು, ಸಾಹಿತ್ಯ ಹಾಗೂ ಹೋರಾಟಗಳ ಕುರಿತು ಸಂಶೋಧಕರು, ವಿಮರ್ಶಕರಿಂದ ಲೇಖನಗಳಿಗೆ ಆಹ್ವಾನ ನೀಡಲಾಗಿದೆ. ಹಾಗೂ ಈ ಕಾರ್ಯಕ್ರಮದಲ್ಲಿ ಕಿರುಚಿತ್ರಗಳ ಪ್ರದರ್ಶನವೂ ಇರಲಿದೆ ಎಂದು ಮಾಹಿತಿ ನೀಡಿದರು.