ಶಿವಮೊಗ್ಗ : ಕಪ್ಪು ಪೇಪರ್ ಬಾಟ್ಲಿಗೆ 500 ರೂಪಾಯಿ ತೆಗೆದು ತೋರಿಸಿ, ಬರೋಬ್ಬರಿ 80 ಸಾವಿರ ರೂಪಾಯಿ ಕಿತ್ತುಕೊಂಡಿದ್ದಾರೆ. ಸಾಗರದ ವ್ಯಕ್ತಿಗೆ ಕೆಇಬಿ ಸರ್ಕಲ್‌ನಲ್ಲಿ ಈ ರೀತಿ ಮೋಸ ಮಾಡಲಾಗಿದೆ. ಕಪ್ಪು ನೋಟು ಬಾಟ್ಲಿಗೆ ಹಾಕಿ ತೆಗೆದ್ರೆ 500 ರೂಪಾಯಿ ಬೆಲೆ ನೋಟುಗಳು ಬರುತ್ವೆ ಅನ್ನೋದನ್ನು ತೋರಿಸಿ ಅದನ್ನು ಎಟಿಎಂಗೆ ಹಾಕಿಸಿ, ಅಸಲಿ ನೋಟು ಅನ್ನೋದನ್ನು ತೋರಿಸಿದ್ದಾರೆ. ಇದನ್ನೇ ನಂಬಿದ ವ್ಯಕ್ತಿಗೆ ಮೇ 28 ರಂದು ಒಂದು ಲಕ್ಷ ಕೊಟ್ರೆ, 2 ಲಕ್ಷ ಸಿಗುವಂತೆ ಮಾಡುತ್ತೇವೆ ಎಂದು ಹೇಳಿದ್ದಾರೆ.
ಇದನ್ನೇ ನಂಬಿದ ಟೀ ಶಾಪ್ ಮಾಲೀಕ, ನನ್ನ ಬಳಿ 80 ಸಾವಿರ ಇದೆ ಅಂತಹ ಹೇಳಿದ್ದಾನೆ. ಶಿವಮೊಗ್ಗಕ್ಕೆ ಬರುವಂತೆ ಖದೀಮರು ಹೇಳಿದ್ದಾರೆ. ಶಿವಮೊಗ್ಗದ ಕೆಇಬಿ ಸರ್ಕಲ್‌ನಲ್ಲಿ ಬಾಟ್ಲಿಯಿಂದ 500 ರೂಪಾಯಿ ಹೊಸ ನೋಟು ತೆಗೆದು ತೋರಿಸಿ, ಬಾಟ್ಲಿಯನ್ನು ಕೊಟ್ಟು 80 ಸಾವಿರ ಈಸ್ಕೊಂಡು ಕಾಲಿಗೆ ಬುದ್ಧಿ ಹೇಳಿದ್ದಾರೆ.
ಈ ವ್ಯಕ್ತಿ ಮನೆಗೆ ಹೋಗಿ ಬಾಟ್ಲಿಗೆ ಕಪ್ಪು ಹಾಳೆ ಹಾಕಿ ಎಷ್ಟು ಸಾರಿ ತೆಗೆದರೂ 500ರ ನೋಟು ಬಾರದೇ ಇರೋದು ಗೊತ್ತಾಗಿದೆ. ತಾನು ಮೋಸ ಹೋಗಿದ್ದೇನೆ ಎಂಬುದು ಆತನಿಗೆ ಅರಿವಾಗಿದೆ. ತುಂಗಾ ನಗರ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.