ಸಾಗರ : ಸಹಾಯಕ ವೈದ್ಯಾಧಿಕಾರಿ ಡಾ.ಶರ್ಮದಾ ಮೃತದೇಹ ಗಣಪತಿ ಕೆರೆಯಲ್ಲಿ ಪತ್ತೆಯಾಗಿದ್ದು, ಆತ್ಮಹತ್ಯೆಯ ಶಂಕೆ ವ್ಯಕ್ತವಾಗಿದೆ. ಶರ್ಮದಾ ಅವರು ತಡರಾತ್ರಿಯಾದರೂ ಮನೆಗೆ ಬಂದಿರಲಿಲ್ಲ. ಈ ಹಿನ್ನೆಲೆ ಆಕೆಯ ಕುಟುಂಬದರು ಹುಡುಕಾಟ ನಡೆಸಿದಾಗ ಗಣಪತಿ ಕೆರೆಯ ಬಳಿ ಆಕೆಯ ಬೈಕ್ ಸಿಕ್ಕಿದೆ. ತಕ್ಷಣವೇ ಕೆರೆಯಲ್ಲಿ ಶೋಧಕಾರ್ಯ ನಡೆಸಿದಾಗ ಶರ್ಮದಾ ಶವ ಪತ್ತೆಯಾಗಿದೆ.
ಅವರು ಸಾಗರದಲ್ಲಿ ತಾಲೂಕು ಸಹಾಯಕ ವೈದ್ಯಾಧಿಕಾರಿಯಾಗಿ ಹಾಗೂ ರಾಷ್ಟ್ರೀಯ ಲಸಿಕಾ ಸುರಕ್ಷತಾ ಅಭಿಯಾನದ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕೋವಿಡ್ ಎರಡು ಮತ್ತು ಮೂರನೇ ಅಲೆಯಲ್ಲಿ ಹಗಲು ರಾತ್ರಿ ಎನ್ನದೇ ಕೆಲಸ ಮಾಡಿದ್ದರು. ದಕ್ಷ, ಪ್ರಮಾಣಿಕವಾಗಿ ಕೆಲಸ ನಿರ್ವಹಿಸುತ್ತಿದ್ದರು. ಇಂತಹ ಉತ್ತಮ ವೈದ್ಯಾಧಿಕಾರಿ ಸಾವನಪ್ಪಿರುವುದಕ್ಕೆ ಸಾವರ್ಜನಿಕರು ಸಂತಾಪ ವ್ಯಕ್ತಪಡಿಸುತ್ತಿದ್ದಾರೆ.
ಮೃತ ಶರ್ಮದಾ ಅವರ ಪತಿ ಸಾಗರ ತಾಲೂಕಿನ ಭೀಮನಕೋಣೆ ಗ್ರಾಮ ಪಂಚಾಯಿತಿ ಪಿಡಿಒ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಘಟನೆ ಬಗ್ಗೆ ಮೃತ ಶರ್ಮ ಅವರ ತಂದೆ ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.