ಕತ್ತಲೆಯಿಂದ ಮುಕ್ತಿ ಯಾವಾಗ? : ಎಲ್ಲಿದೆ ಗೊತ್ತಾ ಈ ಜಾಗ?

ಶಿವಮೊಗ್ಗ : ಶಿವಮೊಗ್ಗದಲ್ಲಿ ರಾತ್ರಿಯಾದರೆ ಈ ಜಾಗದಲ್ಲಿ ಓಡಾಡಲು ಭಯವಾಗುತ್ತೆ... ಇಲ್ಲಿ ಬೀದಿ ದೀಪಗಳು ಆನ್ ಆಗೋದೇ ಅಪರೂಪ... ಆನ್ ಆದ್ರು ಆಗಾಗ ಮಿಂಚಿನಂತೆ ಬೆಳಕು ನೀಡಿ ಮಾಯಾವಾಗುತ್ತವೆ... ಇದ್ಯಾವ್ದೋ ಶಿವಮೊಗ್ಗ ನಗರದ ಹೊರವಲಯದಲ್ಲಿರುವ ಜಾಗ ಅನ್ಕೋಡ್ರಾ.

ಇಲ್ಲಾ, ಇದು ನಿತ್ಯವೂ ಸಾವಿರಾರು ಜನ ಬಂದು ಹೋಗುವ ಮೆಗ್ಗಾನ್ ಆಸ್ಪತ್ರೆ, ಶಿವಮೊಗ್ಗ ಗ್ರಾಮೀಣ ಪೊಲೀಸ್ ಠಾಣೆ, ಪೊಲೀಸ್ ಉಪ ಅಧೀಕ್ಷಕ ಮತ್ತು ಮಹಿಳಾ ಪೊಲೀಸ್ ಠಾಣೆ ಕೂಡ ಇರುವ ಸಾಗರ ರಸ್ತೆಯ ಪರಿಸ್ಥಿತಿ. ಆಸ್ಪತ್ರೆ, ಬಸ್ ಸ್ಟ್ಯಾಂಡ್ ಇಲ್ಲಿಯೇ ಇರುವುದರಿಂದಾಗಿ, ರಾತ್ರಿಯಾದರೂ ಇಲ್ಲಿ ನಿತ್ಯ ನೂರಾರು ಜನರ ಓಡಾಟವಿರುತ್ತೆ.

ಈ ಸ್ಥಳದಲ್ಲಿ ಓಡಾಡಲು ತಮ್ಮ ಮೊಬೈಲ್ ಟಾರ್ಚ್ ಅಥವಾ ವಾಹನಗಳ ಬೆಳಕನ್ನ ಆಶ್ರಯಿಸಬೇಕಾಗಿದೆ. ಕಳ್ಳ ಖದೀಮರು ಕತ್ತಲಲ್ಲಿ ಕೈಚಳಕ ತೋರಿಸಲು ಈ ಸ್ಥಳ ವೇದಿಕೆಯಂತಾಗಿದೆ. ನಿತ್ಯವು ಇಲ್ಲಿ ನಡೆದುಕೊಂಡು ಓಡಾಡುವವರು ಅಧಿಕಾರಿಗಳಿಗೆ ಹಿಡಿಶಾಪ ಹಾಕ್ತಾಯಿದಾರೆ.