ಶಂಕರಘಟ್ಟ : ಪರೀಕ್ಷೆ ನಡೆಸದೆ ದೂರ ಶಿಕ್ಷಣ ಕೋರ್ಸ್‌ಗಳ ಫಲಿತಾಂಶ ಪ್ರಕಟಿಸಿದ್ದ ಕುವೆಂಪು ವಿವಿ ಕ್ರಮಕ್ಕೆ ಸಾಕಷ್ಟು ಆರೋಪ ಪ್ರತ್ಯಾರೋಪಗಳಿಗೆ ಕಾರಣವಾಗಿತ್ತು. ಇದೀಗ ಈ ಕುರಿತು ವಿವಿ ಕುಲಪತಿ ಪ್ರೋ.ಬಿ.ಪಿ.ವೀರಭದ್ರಪ್ಪ ಸ್ಪಷ್ಟನೆ ನೀಡಿದ್ದಾರೆ.
ಕೋವಿಡ್ 19 ಹಿನ್ನೆಲೆ ಪರೀಕ್ಷೆ ನಡೆಸದೇ ಇದ್ದಿದ್ದರಿಂದ ವಿದ್ಯಾರ್ಥಿಗಳು ಹತಾಶರಾಗಿದ್ದು, ಪ್ರಾಣಹಾನಿಯನ್ನು ತಡೆಗಟ್ಟುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಕಾಯ್ದೆ ೨೦೦೦ದಲ್ಲಿ ಕುಲಪತಿಗಳಿಗೆ ನೀಡಲಾಗಿರುವ ಅಧಿಕಾರವನ್ನು ಬಳಸಿ ಫಲಿತಾಂಶ ಪ್ರಕಟಿಸಲಾಗಿದೆ ಎಂದು ಕುಲಪತಿಗಳು ಪತ್ರಿಕ ಪ್ರಕಟಣೆಯ ಮೂಲಕ ಸ್ಪಷ್ಟನೆ ನೀಡಿದ್ದಾರೆ.