ಶಂಕರಘಟ್ಟ : ಹೋಮ್ ಅಸೈನ್‌ಮೆಂಟ್ ಆಧಾರದ ಮೇಲೆ ಕುವೆಂಪು ವಿಶ್ವವಿದ್ಯಾಲಯವು ಪದವಿ ಹಾಗೂ ಸ್ನಾತಕ್ಕೋತರ ಪದವಿಗಳ ಫಲಿತಾಂಶ ಪ್ರಕಟಿಸಿದ್ದು, ಇದೀಗ ವಿವಾದಕ್ಕೆ ಕಾರಣವಾಗಿದೆ.
ಸಿಂಡಿಕೇಟ್ ಸದಸ್ಯರ ವಿರೋಧದ ನಡುವೆಯೂ ಫೆಬ್ರವರಿ 7ರಂದು ಫಲಿತಾಂಶ ಪ್ರಕಟಿಸಲಾಗಿದೆ. ವಿವಿಯ ದೂರ ಶಿಕ್ಷಣ ವಿಭಾಗದ ಈ ಕ್ರಮವನ್ನ ಸಿಂಡಿಕೇಟ್ ಸದಸ್ಯರು ವಿರೋಧಿಸಿದ್ದಾರೆ. ಜೊತೆಗೆ ಈ ವಿಭಾಗದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕುಲಪತಿ ಹಾಗೂ ಕುಲಸಚಿವರಿಗೆ ಬುಧವಾರ ಪತ್ರ ಬರೆದಿದ್ದಾರೆ.
ಆದರೆ ವಿಶ್ವವಿದ್ಯಾಲಯದ ಆಡಳಿತತವು ಫಲಿತಾಂಶ ಪ್ರಕಟಣೆಯಲ್ಲಿ ಯಾವುದೇ ನಿಯಮಗಳನ್ನ ಉಲ್ಲಂಘಿಸಿಲ್ಲ. ಕೊರೊನಾ ಸಮಯದಲ್ಲಿ ಪರೀಕ್ಷೆ ಮತ್ತು ಫಲಿತಾಂಶ ಪ್ರಕಟಣೆಗೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಯುಜಿಸಿ ಹೊರಡಿಸಿರುವ ನಿಯಮಾವಳಿಗಳ ಅನುಸಾರವೇ ಕ್ರಮ ಕೈಗೊಳ್ಳಲಾಗಿದೆ ಎಂದು ಪರೀಕ್ಷಾಂಗ ವಿಭಾಗದ ಕುಲಸಚಿವರು ಹೇಳಿದ್ದಾರೆ.