ಶಿವಮೊಗ್ಗ : ಇಲ್ಲಿನ ಮಧುಮೇಹಿಗಳಿಗೆ ಇಲ್ಲಿದೆ ಒಂದು ಶುಭ ಸುದ್ಧಿ. ಈ ಮೊದಲು ಮಧುಮೇಹ ಕಾಯಿಲೆಯನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ. ಅದನ್ನು ಕೇವಲ ನಿಯಂತ್ರಣದಲ್ಲಿಡಬಹುದು ಎಂಬ ನಂಬಿಕೆ ಮಾತ್ರ ಇತ್ತು. ಆದ್ರೀಗ ಕಾಲ ಬದಲಾಗಿದೆ. ಮಧುಮೇಹ ಕಾಯೆಲೆಯನ್ನು ಯಾವುದೇ ಔಷಧಿಗಳನ್ನು ನೀಡದೆ ಗುಣಪಡಿಸುವ ಹೊಸ ಪದ್ಧತಿ ಒಂದಿದೆ. ಅದುವೇ ಡಯಾಬಿಟಿಸ್ ರಿವರ್ಸಲ್ ಪದ್ಧತಿ.
ಇದೀಗ ಈ ಪದ್ಧತಿ ಶಿವಮೊಗ್ಗದಲ್ಲಿಯೂ ಲಭ್ಯವಾಗಲಿದೆ. ಇಲ್ಲಿನ ಐಲೆಟ್ಸ್ ಡಯಾಬಿಟೀಸ್ ಹಾಸ್ಪೆಟಲ್‌ನಲ್ಲಿ ಈ ಸೌಲಭ್ಯ ಆರಂಭವಾಗಲಿದ್ದು ಮಲೆನಾಡಿನ ಮಧುಮೇಹಿಗಳಿಗೆ ವರದಾನವಾಗಲಿದೆ. ಬೆಂಗಳೂರು ಹೊರತಾಗಿ ರಾಜ್ಯದಲ್ಲಿ ಶಿವಮೊಗ್ಗದಲ್ಲಿ ಮಾತ್ರ ಈ ಸೌಲಭ್ಯ ಲಭ್ಯವಾಗಲಿದೆ. ಈ ಹಿನ್ನೆಲೆ ಮೇ 19ರಂದು ಡಯಾಬಿಟೀಸ್ ರಿವರ್ಸಲ್ ಪದ್ಧತಿಯ ಕುರಿತಾಗಿ ಐಲೆಟ್ಸ್ ಡಯಾಬಿಟೀಸ್ ಹಾಸ್ಪೆಟಲ್‌ನಲ್ಲಿ ವಿಶೇಷ ಮಾಹಿತಿ ಶಿಬಿರ ಆಯೋಜನೆ ಮಾಡಲಾಗಿದೆ. ಈ ಶಿಬಿರವನ್ನು ಐಎಂಎ ಉಪಾಧ್ಯಕ್ಷ ಡಾ.ಶಂಭುಲಿಂಗ ಬಂಕೊಳ್ಳಿ ಉದ್ಘಾಟಿಸಲಿದ್ದಾರೆ ಎಂದು ಐಲೆಟ್ಸ್ ಡಯಾಬಿಟೀಸ್ ಹಾಸ್ಪೆಟಲ್‌ನಿಂದ ಮಾಧ್ಯಮಗೋಷ್ಠಿ ನಡೆಸಿ ಮಾಹಿತಿ ನೀಡಲಾಗಿದೆ.