165 ಕೋಟಿ ವೆಚ್ಚದಲ್ಲಿ ಜೋಗದ ಅಭಿವೃದ್ದಿ 

ಹೈಲೆಟ್ಸ್ : 

165 ಕೋಟಿ ವೆಚ್ಚದಲ್ಲಿ ಜೋಗದ ಅಭಿವೃದ್ದಿ 
ವೀಕ್ಷಣಾ ಗೋಪುರ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ
ಕಮಾನು, ದ್ವಾರ, ಕಾರಂಜಿ ಸೇರಿದಂತೆ ಹಲವಾರು ಕಾಮಗಾರಿ 
ಹೇಗಿರುತ್ತೆ ಗೊತ್ತಾ ವೀಕ್ಷಣಾ ಗೋಪುರ..?

ಸಾಗರ : ವಿಶ್ವವಿಖ್ಯಾತ ಜೋಗ ಜಲಪಾತ ವೀಕ್ಷಣೆಗೆ ಪ್ರತಿ ತಿಂಗಳು ಲಕ್ಷಾಂತರ ಜನರು ಬಂದೇ ಬರುತ್ತಾರೆ. ಇಲ್ಲಿ ಪ್ರವಾಸಿಗರಿಗೆ ಅಗತ್ಯ ಸೌಲಭ್ಯಗಳು ಇಲ್ಲ, ವೀಕ್ಷಣೆಗೆ ಅನುಕೂಲವಾಗುವಂತೆ ಯಾವುದೇ ಅಭಿವೃದ್ದಿ ಕಾರ್ಯ ಕೈಗೊಂಡಿಲ್ಲ ಅನ್ನೋ ಕೊರೊಗು ಮೊದಲಿನಿಂದಲೂ ಇದೆ. ಅದೇ ಕಾರಣಕ್ಕೆ ಸರಕಾರ ಬರೋಬ್ಬರಿ ೧೬೫ ಕೋಟಿ ರೂಪಾಯಿ ವೆಚ್ಚದಲ್ಲಿ ಜೋಗದ ಅಭಿವೃದ್ದಿಗೆ ಯೋಜನೆ ರೂಪಿಸಿದೆ. ವೀಕ್ಷಣಾ ಗೋಪುರ, ಕಮಾನು, ದ್ವಾರ, ಕಾರಂಜಿ ಸೇರಿದಂತೆ ಹಲವಾರು ಕಾಮಗಾರಿಗಳಿಗೆ ಜೋಗದಲ್ಲಿ ಚಾಲನೆ ನೀಡಲಾಗಿದೆ. ಇತ್ತೀಚೆಗಷ್ಟೇ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ. ನಾರಾಯಣಗೌಡ ಸ್ಥಳ ಪರಿಶೀಲನೆಯನ್ನೂ ಕೂಡ ಮಾಡಿದ್ದರು. ಅಲ್ಲದೆ ಜೋಗದ ಅಭಿವೃದ್ಧಿಯ ವೀಕ್ಷಣೆ ಮಾಡಿ, ನೀಲ ನಕ್ಷೆಯನ್ನು ಸಹ ಪರಿಶೀಲನೆ ಮಾಡಿದ್ದರು. ಈಗಾಗಲೇ ವೀಕ್ಷಣಾ ಗೋಪುರದ ಕಾಮಗಾರಿ ಶೇ. ೫೦ ರಷ್ಟು ಮುಗಿದಿದೆ. ಏನಪ್ಪ ಈ ವೀಕ್ಷಣಾ ಗೋಪುರ ಅಂದ್ರೆ ಜಲಪಾತದ ವೀಕ್ಷಣಾ ಸ್ಥಳದ ಕೆಳಭಾಗದಿಂದ ಕೊರೆದು ಪಿಲ್ಲರ್ ನಿರ್ಮಿಸಿ, ವೀಕ್ಷಣಾ ಗೋಪುರ ನಿರ್ಮಾಣ ಮಾಡುವುದು. ಶಂಕರ್ ನಾರಾಯಣ ಕಂಪನಿ ಗುತ್ತಿಗೆಯನ್ನು ಪಡೆದುಕೊಂಡಿದೆ.