ಜಿಂಕೆ ಮಾಂಸ ಮಾರುತ್ತಿದ್ದವನ ಬಂಧನ 

ಆನಂದಪುರ : ಆನಂದಪುರ ಸಮೀಪದ ದಾಸಗೊಪ್ಪ ಸರ್ಕಲ್ ಬಳಿ ಜಿಂಕೆ ಮಾಂಸ ಮಾರಾಟ ಮಾಡುತ್ತಿದ್ದವರಲ್ಲಿ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೊಬ್ಬ ಪರಾರಿಯಾಗಿದ್ದಾನೆ.

ಖಚಿತ ಮಾಹಿತಿ ಮೇರಗೆ ಮಾಂಸ ಮಾರಾಟ ಮಾಡುತ್ತಿದ್ದ ಇವರ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಪೊಲೀಸ್ ವಾಹನ ಕಂಡ ಕೂಡಲೇ ಕೈಯಲಿದ್ದ ಚೀಲವನ್ನು ಮರೆಮಾಚಿಕೊಂಡು ಒಬ್ಬನು ಓಡಲು ಶುರು ಮಾಡಿದ್ದಾನೆ. ನಂತರ ಮತ್ತೊಬ್ಬ ಕೂಡ ಓಡಲು ಪ್ರಾರಂಭಿಸಿದ್ದಾನೆ. ಪೋಲಿಸರು ಚೀಲ ಹಿಡಿದುಕೊಂಡು ಓಡುತ್ತಿದ್ದವನನ್ನು ಹಿಡಿದು ಬಂಧಿಸಿದ್ದಾರೆ. ಮತ್ತೊಬ್ಬ ಪರಾರಿಯಾಗಿದ್ದು, ಆತನನ್ನು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ.