ಬೈಕ್ ಕಳ್ಳರ ಬಂಧನ 

ಶಿವಮೊಗ್ಗ : ದ್ವಿಚಕ್ರ ವಾಹನ ಕದಿಯವ ಕಳ್ಳರ ಗುಂಪೊಂದನ್ನ ಶಿವಮೊಗ್ಗ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಹರಿಗೆ ಗ್ರಾಮದ ಮನೆಯೊಂದರಲ್ಲಿ ನಿಲ್ಲಿಸಿದ್ದ ಹೀರೋ ಹೋಂಡಾ ಸ್ಪ್ಲೆಂಡರ್ ಪ್ರೋ ಬೈಕ್ ಕಳುವಾಗಿತ್ತು. ಈ ಕುರಿತಾಗಿ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಕುರಿತು ತನಿಖೆ ಕೈಗೊಂಡ ಪೊಲೀಸರು ವಿನಾಯಕ ನಗರದ ರಾಜಪ್ಪ, ರಾಗಿಗುಡ್ಡದ ಸೈಯ್ಯದ್ ಸುಬಾನ್ ಹಾಗೂ ಕೊಮ್ಮನಾಳು ಗ್ರಾಮದ ಮಂಜುನಾಥ ಎಂಬುವವರನ್ನ ಬಂಧಿಸಿದ್ದಾರೆ. ಆರೋಪಿಗಳಿಂದ ಈ ಪ್ರಕರಣವೂ ಸೇರಿದಂತೆ ಸೇರಿದಂತೆ ಸಾಗರ ಟೌನ್, ಸಾಗರ ಗ್ರಾಮಾಂತರ, ಶಿಕಾರಿಪುರ ಟೌನ್, ಭದ್ರಾವತಿ ಹಳೆನಗರ, ಮಾಳೂರು, ಹೊನ್ನಾಳಿ, ಹರಿಹರ ಟೌನ್, ಮಲೆಬೆನ್ನೂರು, ದಾವಣಗೆರೆ ಮತ್ತು ಹಾವೇರಿ ಟೌನ್ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಳ್ಳತನವಾಗಿದ್ದ ವಿವಿಧ ಕಂಪನಿಯ 15ಬೈಕ್‌ಗಳನ್ನ ವಶಪಡಿಸಿಕೊಳ್ಳಲಾಗಿದೆ. ಇವುಗಳ ಮೌಲ್ಯ 3 ಲಕ್ಷದ 50ಸಾವಿರ ಇರಬಹುದೆಂದು ಅಂದಾಜಿಸಲಾಗಿದೆ