ಶಿವಮೊಗ್ಗ : ಕೆಲ ದಿನಗಳ ಹಿಂದೆ ಸುರಿದ ಭಾರಿ ಮಳೆಯ ನಂತರ ಕುಡಿಯುವ ನೀರಿನ ಬಣ್ಣ ಕೆಂಪಾಗಿದ್ದು, ಇನ್ನೂ ಕೂಡ ಅದೇ ಬಣ್ಣದಲ್ಲಿ ನೀರು ಬರ್‍ತಾಯಿದೆ. ಈ ಕುರಿತಾಗಿ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆ ಮಹಾನಗರ ಪಾಲಿಕೆ ಉಪ ಮೇಯರ್ ಗನ್ನಿ ಶಂಕರ್ ಪಾಲಿಕೆಯ ಪಂಪ್ ಹೌಸ್‌ಗೆ ಭೇಟಿ ನೀಡಿ ಪರಿಶೀಲಿಸಿ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದಾರೆ.
ಬಳಿಕ ಮಾತನಾಡಿದ ಅವರು, ಇಲ್ಲಿ ಕೆಲಸ ಮಾಡೋ ನೌಕರರು ಸರಿಯಾಗಿ ಕೆಲಸಕ್ಕೆ ಬರ್‍ತಾಯಿಲ್ಲ. ಇಲ್ಲಿ ತೇಜಸ್ವಿನಿ ಎಂಬುವವರು ಇಂಜಿನಿಯರ್ ಆಗಿ ಕೆಲಸ ನಿರ್ವಹಿಸ್ತಾಯಿದ್ದಾರೆ. ಆದ್ರೆ ಅವರ ಮಾತನ್ನು ನೌಕರರು ನಿರ್ಲಕ್ಷಿಸುತ್ತಿದ್ದಾರೆ. ಹೀಗಾಗಿ ಅವರ ಜಾಗಕ್ಕೆ ಬೇರೆ ಪುರಷ ಇಂಜಿನಿಯರ್ ಅವರನ್ನು ನೇಮಕ ಮಾಡಲಾಗುತ್ತದೆ ಎಂದರು.